ಉಡುಪಿ: ಶೇಕಡವಾರು ಮತದಾನ ಸಂಗ್ರಹಕ್ಕೆ ಸಿಬ್ಬಂದಿ ನೇಮಕ

Update: 2019-04-11 16:00 GMT

 ಉಡುಪಿ, ಎ.11: ಎ.18ರ ಉಡುಪಿ -ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಮತದಾನದ ವೇಳೆ ಚಲಾವಣೆಯಾದ ಮತಗಳ ಮಾಹಿತಿ ಯನ್ನು ಪ್ರತಿ 2 ಗಂಟೆಗೊಮ್ಮೆ 8 ವಿಧಾನಸಭಾ ಕ್ಷೇತ್ರಗಳಿಂದ ಪಡೆದು ಕ್ರೂಢೀಕರಿಸಿ ಚುನಾವಣಾ ಆಯೋಗಕ್ಕೆ ಕಳುಹಿಸಲು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಪ್ರತಿ ವಿಧಾನಸಭಾವಾರು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿದ್ದು, ನೇಮಕ ಮಾಡಿರುವ ಸಿಬ್ಬಂದಿಗಳು, ಮತ ಚಲಾವಣೆಯಾದ ಬಗ್ಗೆ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಲು ಸೂಚಿಸಲಾಗಿದೆ.

ಇದಕ್ಕಾಗಿ ಉಡುಪಿ ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್ ಅವರನ್ನು ಜಿಲ್ಲಾ ನೋಡೆಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ನೇಮಕ ಗೊಂಡಿರುವ ಸಿಬ್ಬಂದಿಗಳಿಗೆ ಎ.13ರಂದು ತರಬೇತಿ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News