ಇವಿಎಂ ದೋಷ: ಕಾಂಗ್ರೆಸ್‌ನಿಂದ ಚುನಾವಣಾ ಆಯೋಗಕ್ಕೆ 39 ದೂರು
Update: 2019-04-11 21:36 IST
ಮುಂಬೈ, ಎ. 11: ಮತದಾನ ನಡೆಯುತ್ತಿರುವ ಮಹಾರಾಷ್ಟ್ರದ 6 ಲೋಕಸಭಾ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಇವಿಎಂ ಕಾರ್ಯಾಚರಣೆಯಲ್ಲಿನ ದೋಷದ ಬಗ್ಗೆ ಕಾಂಗ್ರೆಸ್ ಬುಧವಾರ ಚುನಾವಣಾ ಆಯೋಗಕ್ಕೆ 39 ದೂರುಗಳನ್ನು ಸಲ್ಲಿಸಿದೆ.
ನಾಗಪುರದ ಕೆಲವು, ಚಂದ್ರಾಪುರದ 8, ವಾರ್ಧಾದ 6 ಹಾಗೂ ರಾಮ್‌ಟೆಕ್‌ನ 5 ಮತಗಟ್ಟೆಗಳ ಇವಿಎಂ ಕಾರ್ಯಾಚರಣೆ ದೋಷದ ಬಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ದೂರುಗಳಲ್ಲಿ 12 ದೂರುಗಳನ್ನು ಇಮೇಲ್ ಮೂಲಕ ಕಳುಹಿಸಿದೆ ಎಂದು ಕಾಂಗ್ರೆಸ್‌ನ ಹೇಳಿಕೆ ತಿಳಿಸಿದೆ.
ಯುವಾತ್ಮಲ್, ವಾಶಿಮ್, ಗಡ್ಚಿರೋಳಿ ಹಾಗೂ ಚಿಮೂರ್ ಕ್ಷೇತ್ರದಲ್ಲಿ ಇವಿಎಂಗಳ ಅಡಚಣೆ ಬಗ್ಗೆ ಕೂಡ ಪಕ್ಷ ನಾಲ್ಕು ದೂರುಗಳನ್ನು ಸಲ್ಲಿಸಿದೆ.
ಲೋಕಸಭೆಯ ಮೊದಲ ಹಂತದ ಚುನಾವಣೆಯಲ್ಲಿ ಈ 6 ಲೋಕಸಭಾ ಕ್ಷೇತ್ರಗಳಲ್ಲದೆ, ವಿಧರ್ಭದ ಭಂಡಾರಾ-ಗೋಂಡಿಯಾ ಕ್ಷೇತ್ರದಲ್ಲಿ ಕೂಡ ಗುರುವಾರ ಚುನಾವಣೆ ನಡೆಯಿತು.