ನರೇಂದ್ರ ಮೋದಿಯದು ಗುಣಗ್ರಾಹಿ ಸರಕಾರ: ಬಿ.ಎಲ್.ಸಂತೋಷ್

Update: 2019-04-11 16:19 GMT

ಮಣಿಪಾಲ, ಎ.11: ಕೇಂದ್ರದ ನರೇಂದ್ರ ಮೋದಿ ಸರಕಾರ ಗುಣಗ್ರಾಹಿ ಸರಕಾರವಾಗಿದೆ. ಇದು ಸಾಲುಮರದ ತಿಮ್ಮಕ್ಕ, ಸೂಲಗತ್ತಿ ನರಸಮ್ಮ ಮುಂತಾದ ನಿಜವಾದ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ದೇಶಕ್ಕೋಸ್ಕರ ಸೇವೆ ಸಲ್ಲಿಸಿದ ವರನ್ನು ಗುರುತಿಸುವ ಗುಣಗ್ರಾಹಿ ಸರಕಾರ ಇದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.

ಮಣಿಪಾಲದ ಖಾಸಗಿ ಹೋಟೆಲ್‌ನಲ್ಲಿ ಇಂದು ಸಂಜೆ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ನಡೆದ ‘ನನ್ನ ದೇಶ ನನ್ನ ಪಾತ್ರ’ ಮಹಿಳೆಯ ರೊಂದಿಗಿನ ಸಂವಾದದಲ್ಲಿ ಅವರು ಮಾತನಾಡುತಿದ್ದರು. ನರೇಂದ್ರ ಮೋದಿ ಅವರನ್ನು ಯಾಕೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಹಾಗೂ ಅವರ ಆಡಳಿತದಲ್ಲಿ ದೇಶ ಯಾವ ರೀತಿ ಅಭಿವೃದ್ಧಿ ಹೊಂದಿದೆ ಎಂಬ ಬಗ್ಗೆ ಸಂತೋಷ್ ತಮ್ಮ ಭಾಷಣದಲ್ಲಿ ವಿವರಿಸಿದರು.

ಜನ ಭಾಗಿದಾರಿಕೆ ಕಡೆಗೆ ಮೋದಿ ಸರಕಾರ ಹೆಜ್ಜೆ ಹಾಕುತ್ತಿದ್ದು, 1.7 ಕೋಟಿ ಜನರು ಗ್ಯಾಸ್ ಸಬ್ಸಿಡಿಯನ್ನು ತ್ಯಜಿಸಿರುವುದೇ ಇದಕ್ಕೆ ಸಾಕ್ಷಿ. ದೇಶದ ಭದ್ರತೆಗೆ ಸಂಬಂಧಿಸಿ ಕ್ಯಾಬಿನೆಟ್ ಕಮಿಟಿಯಲ್ಲಿ ಇಬ್ಬರು ಮಹಿಳಾ ಸಚಿವರು ಇರುವುದು ಮಹಿಳಾ ಸಬಲೀಕರಣದ ದ್ಯೋತಕ ಎಂದರು.

ಐದು ವರ್ಷಗಳ ಆಡಳಿತದಲ್ಲಿ ಮೋದಿ ದೇಶದಲ್ಲಿ ಯಾವ ರೀತಿ ಬದಲಾವಣೆ ತಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ರೀತಿ ಬಲಿಷ್ಠವಾಗು ತ್ತಿದೆ ಎಂಬುದನ್ನು ಅವರು ವಿವರಿಸಿದರು. ತನ್ನ ಆಡಳಿತದಲ್ಲಿ ಮೋದಿ ರಾಜಕೀಯಕ್ಕೆ ಗೌರವವನ್ನು ತಂದಿದ್ದಾರೆ. ನಮ್ಮ ಕ್ಷ ಜಾತಿ ರಾಜಕಾರಣವನ್ನು ಮಾಡಿಲ್ಲ. ಜನರ ಆಕಾಂಕ್ಷೆಯಲ್ಲಿ ತೇಲಿ ಅಧಿಕಾರಕ್ಕೆ ಬಂದಿದೆ. ಪಕ್ಷದ ಕಾರ್ಯಕರ್ತರು ಸ್ವಾಭಿಮಾನದಿಂದ ಮತ್ತೊಮ್ಮೆ ಮತ ಕೆೀಳುವ ಸ್ಥಿತಿ ದೇಶದಲ್ಲಿದೆ ಎಂದರು.

ದೇಶ ಸುರಕ್ಷಿತ ಕೈಯಲ್ಲಿದೆ. ಇತ್ತೀಚೆಗೆ ನಡೆದ ಬಾಲಕೋಟ್ ಏರ್‌ಸ್ಟ್ರೈಕ್‌ನಲ್ಲಿ ಮಸೂದ್ ಅಜರ್ ಸಂಬಂಧಿಕರು 4 ಮಂದಿ ಮೃತರಾಗಿದ್ದಾರೆ. ಇದು ಸುಳ್ಳಾದರೆ ಫೇಸ್‌ಬುಕ್ ಲೈವ್‌ನಲ್ಲಿ ಅವರು ಮುಖ ತೋರಿಸಲಿ ಎಂ ದು ಸಂತೋಷ್ ಸವಾಲು ಹಾಕಿದರು.

ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 25 ವರ್ಷ ಇದೆ. ಗರಿಷ್ಠ ವಯಸ್ಸು ಏಕಿಲ್ಲ ಎಂಬ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷ ಈಗಾಗಲೇ ಅಲಿಖಿತವಾಗಿ ಗರಿಷ್ಠ 75 ವರ್ಷದ ಮಿತಿಯನ್ನು ಹಾಕಿಕೊಂಡಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜನರ ನಿರೀಕ್ಷೆ ಹೆಚ್ಚುತ್ತಿದೆ. ಇದಕ್ಕೆ ದೈಹಿಕ ಶ್ರಮ ಬೇಕಾಗುತ್ತದೆ. ಹೀಗಾಗಿ ನಾವೇ ಸ್ವಯಂ ನಿರ್ಬಂವನ್ನು ಹಾಕಿಕೊಂಡಿದ್ದೇವೆ ಎಂದರು.

ಹಿರಿಯ ವೈದ್ಯೆ, ಕೆಎಂಸಿಯ ಮಕ್ಕಳ ತಜ್ಞೆ ಡಾ.ಪುಷ್ಪಾ ಕಿಣಿ ಸಂವಾದ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ರಘುಪತಿ ಭಟ್, ಮುಖಂಡರಾದ ಯಶ್‌ಪಾಲ್ ಸುವರ್ಣ, ಉದಯಕುಮಾರ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಮಹೇಶ್ ಠಾಕೂರ್, ಜಿಪಂ ಸದ್ಯೆ ಶಿಲ್ಪಾ ಸುವರ್ಣ ಉಪಸ್ಥಿತರಿದ್ದರು.

ಜಿಪಂ ಸದಸ್ಯೆ ರೇಶ್ಮಾ ಶೆಟ್ಟಿ ಸ್ವಾಗತಿಸಿ, ರಶ್ಮಿ ಬಾಲಕೃಷ್ಣ ಶೆಟ್ಟಿ ವಂದಿಸಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News