×
Ad

ಯುವ ಜನತೆ - ಸಮೂಹ ಮಾಧ್ಯಮ: ಉಪನ್ಯಾಸ

Update: 2019-04-11 21:51 IST

ಉಡುಪಿ, ಎ.11: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಕಲಾ ಸಂಘ ಹಾಗೂ ಐಕ್ಯೂಎಸಿ ಘಟಕ ವತಿಯಿಂದ ಬುಧವಾರ ಯುವ ಜನತೆ ಮತ್ತು ಸಮೂಹ ಮಾಧ್ಯಮ ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಜ್ಜರಕಾಡುಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಂಜಪ್ಪ ಡಿ. ಗೋಣಿ ಮಾತನಾಡಿ, ಸಮೂಹ ಮಾಧ್ಯಮ ಅದರಲ್ಲೂ ವಿಶೇಷವಾಗಿ ಸೋಶಿಯಲ್ ಮೀಡಿಯಾಗಳು ಇತ್ತೀಚಿನ ದಿನಗಳಲ್ಲಿ ಯುವ ಜನರ ಅತ್ಯಂತ ಪ್ರಾಮುಖ್ಯ ಮತ್ತು ಆಕರ್ಷಿತ ವಿಷಯವಾಗಿದೆ. ಸೋಶಿಯಲ್ ಮೀಡಿಯಾಗಳಿಂದ ಹಲವು ಪ್ರಯೋಜನವಿದ್ದರೂ, ಅದರ ಅವಲಂಬನೆ ಯುವ ಜನರಲ್ಲಿ ಹೆಚ್ಚಾದಲ್ಲಿ ಅಪಾಯವು ಇದೆ ಎಂದರು.

ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಡಾ. ಸುರೇಶ ರೈ ಕೆ. ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News