ಸುರತ್ಕಲ್‌ನಲ್ಲಿ ಮಾಳವಿಕಾ ಅವಿನಾಶ್ ಮತಯಾಚನೆ

Update: 2019-04-11 16:39 GMT

ಸುರತ್ಕಲ್, ಎ.11: ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಗುರುವಾರ ಸುರತ್ಕಲ್‌ನಲ್ಲಿ ಮತಯಾಚಿಸಿ ಮೀನುಗಾರರೊಂದಿಗೆ ಮಾತುಕತೆ ನಡೆಸಿದರಲ್ಲದೆ ಮತದಾರರೊಂದಿಗೆ ಮೋದಿ ಸಾಧನೆಯ ಕುರಿತು ಚರ್ಚಿಸಿ ಅಭಿವೃದ್ಧಿಗಾಗಿ ನರೇಂದ್ರ ಮೋದಿಗೆ ಮತ ಚಲಾಯಿಸುವಂತೆ ಕರೆ ನೀಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮಾಳವಿಕ ಅವರು, ಮಂಡ್ಯದಲ್ಲಿ ರಾಜ್ಯದ ಸಮ್ಮಿಶ್ರ ಸರಕಾರ ಅಧಿಕಾರದ ದುರುಪಯೋಗ ನಡೆಸುತ್ತಿದೆ. ಇದಕ್ಕೆ ಅಲ್ಲಿನ ಜಿಲ್ಲಾಧಿಕಾರಿಯ ವರ್ಗಾವಣೆಯೇ ಸಾಕ್ಷಿಯಾಗಿದೆ. ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋಲಿನ ಭೀತಿಯಿಂದ ಕೇರಳದ ವಯನಾಡಿನಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ದೇಶ, ಮೋದಿ ವಿಚಾರದಲ್ಲಿ ಮಾತನಾಡುವ ನೈತಿಕ ಅರ್ಹತೆ ಕಾಂಗ್ರೆಸ್ ಕಳೆದುಕೊಂಡಿದೆ. ಯುಪಿಎ ಅಧಿಕಾರದ ಅವಧಿಯಲ್ಲಿ ಆದ ಭ್ರಷ್ಟಾಚಾರ ವನ್ನು ಜನತೆ ಮರೆತಿಲ್ಲ ಎಂದರು.

ಈ ಸಂದರ್ಭ ಮಹಿಳಾ ಬಿಜೆಪಿ ಅಧ್ಯಕ್ಷೆ ಪೂಜಾ ಪೈ, ಕವಿತಾ ಪೈ, ಮಾಜಿ ಮೇಯರ್ ರಜನಿ ದುಗ್ಗಣ್ಣ, ಸುಮಿತ್ರಾ ಕರಿಯಾ, ಶಾಂತಾ ರವೀಂದ್ರ, ನಯನಾ ಕೋಟ್ಯಾನ್ ಗುಡ್ಡೆಕೊಪ್ಲ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಗುಣಶೇಖರ ಶೆಟ್ಟಿ, ರಾಜೇಶ್ ಶೆಟ್ಟಿ, ಅಶೋಕ್ ಕೃಷ್ಣಾಪುರ, ಲೋಕೇಶ್ ಬೊಳ್ಳಾಜೆ, ಅರುಣ್ ಚೌಟ, ಭರತ್‌ರಾಜ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News