ಮಿಥುನ್ ರೈ ಪರ ಐವನ್ ಡಿಸೋಜ ಪ್ರಚಾರ
Update: 2019-04-11 22:10 IST
ಮಂಗಳೂರು, ಎ.11: ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಗುರುವಾರ ಮಂಗಳೂರು ಮೀನು ಮಾರುಕಟ್ಟೆ (ದಕ್ಕೆ) ಹಾಗೂ ವಿವಿಧ ಕಡೆ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರ ನಡೆಸಿದರು.
ಈ ಸಂದರ್ಭ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು ಮಿಥುನ್ ರೈ ಅವರನ್ನು ಅಧಿಕ ಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷವು ರಾಷ್ಟದ ಶೇ.20ರಷ್ಟು ಜನರಿಗೆ 72,000 ವಾರ್ಷಿಕ ವರಮಾನದ ಬೆಂಬಲ ನೀಡಲು ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಳ್ಳುವ ಮೂಲಕ ರಾಷ್ಟ್ರದ ಬಡತನ ನಿರ್ಮೂಲನಕ್ಕೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎಂದರು.
ಈ ಸಂದರ್ಭ ಸಿ.ಎಂ.ಮುಸ್ತಫ, ಯೂಸುಫ್ ಉಚ್ಚಿಲ್, ಅನ್ವರ್ ರಿಕೋ, ಸತೀಶ್ ಪೆಂಗಲ್, ಟಿ.ಎಂ. ಹನೀಫ್, ಆರೀಫ್ ಭಾವಾ, ಹನೀಫ್ ಬೆಂಗ್ರೆ, ಅಹ್ಮದ್ ಬಾವಾ ಮತ್ತಿತರರಿದ್ದರು.