×
Ad

ಹಳೆ ಬಂದರು ಪ್ರದೇಶದಲ್ಲಿ ಮಿಥುನ್ ರೈ ಪರ ಜಂಟಿ ಪ್ರಚಾರ

Update: 2019-04-11 22:11 IST

ಮಂಗಳೂರು, ಎ.11:ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಮಾಜಿ ಶಾಸಕ ಜೆ.ಆರ್.ಲೋಬೊ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗುರುವಾರ ಹಳೆ ಬಂದರು ಪರಿಸರದಲ್ಲಿ ಜಂಟಿ ಪ್ರಚಾರ ನಡೆಸಿದರು.

ಈ ಸಂದರ್ಭ ಸ್ಥಳೀಯರೊಂದಿಗೆ ಮಾತನಾಡಿದ ಅವರು ಹಳೆ ಬಂದರ್‌ನ ಅಭಿವೃದ್ಧಿ, ಇಎಸ್‌ಐ ಆಸ್ಪತ್ರೆಯ ಉನ್ನತೀಕರಣ, ಶ್ರಮಿಕ ಸಂಘದ ಶ್ರೇಯೋ ಭಿವೃದ್ಧಿಗೋಸ್ಕರ ಹಾಗೂ ಬಂದರ್‌ನ ಸಮಸ್ಯೆಗಳ ಪರಿಹಾರಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಶ್ರಮಿಸಲು ಸದಾ ಸಿದ್ಧರಾಗಿದ್ದಾರೆ ಎಂದರು.

ಶ್ರಮಿಕ ಸಂಘದ ಮುಖಂಡ ಇಮ್ತಿಯಾಝ್, ಮಾಜಿ ಕಾರ್ಪೊರೇಟರ್ ಅಬ್ದುಲ್ ಲತೀಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News