ಎ.23ಕ್ಕೆ ‘ಈಮಾನ್ ಇಸ್ಲಾಂ’ನಿಂದ ಉಮ್ರಾ ಪ್ರವಾಸ
Update: 2019-04-11 22:18 IST
ಮಂಗಳೂರು, ಎ.11: ಕರಾವಳಿಯ ಪ್ರಸಿದ್ಧ ಹೇರಾ ಗ್ರೂಪ್ ಅಧೀನದಲ್ಲಿರುವ ‘ಈಮಾನ್ ಇಸ್ಲಾಂ’ ಸಂಸ್ಥೆಯಿಂದ ಎ. 23ರಂದು ಉಮ್ರಾ ಯಾತ್ರೆಯ ತಂಡವು ಮಂಗಳೂರಿನ ವಿಮಾನ ನಿಲ್ದಾಣದಿಂದ ಹೊರಟು ಮುಂಬೈ ಮೂಲಕ ಮಕ್ಕಾ ತಲುಪಲಿದೆ.
15 ದಿನದ ಈ ಪ್ರವಾಸದಲ್ಲಿ ಪವಿತ್ರ ನಗರಗಳಾದ ಮಕ್ಕಾ, ಮದೀನಾಗಳಲ್ಲಿ ಉಮ್ರಾ ಮತ್ತು ಝಿಯಾರತ್ ನಡೆಸಲಾಗುವುದು. ಆನಂತರ ಯಾತ್ರೆಯ ತಂಡವು ಮೇ 6ರಂದು ಮಂಗಳೂರಿಗೆ ವಾಪಸಾಗಲಿದೆ.
ಸಂಸ್ಥೆಯು ಪವಿತ್ರ ರಮಝಾನ್ ತಿಂಗಳು ಹಾಗೂ ಹಜ್ ಯಾತ್ರೆಯ ಪ್ಯಾಕೇಜ್ ಕೂಡ ಈಗಾಗಲೇ ಬಿಡುಗಡೆಗೊಂಡಿದ್ದು, ಬುಕ್ಕಿಂಗ್ ಆರಂಭಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ 82960 69358 / 94823 77404/ 0824- 2428010ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.