ಅಡ್ವಾಣಿ ನಂತರ ಮೋದಿ, ಶಾಗೆ ಕುಟುಕಿದ ಗಡ್ಕರಿ

Update: 2019-04-11 17:06 GMT

ಹೊಸದಿಲ್ಲಿ,ಎ.11: ಬಿಜೆಪಿ ತನ್ನ ಟೀಕಾಕಾರರನ್ನು ಎಂದಿಗೂ ರಾಷ್ಟ್ರವಿರೋಧಿಗಳು ಎಂದು ಕರೆದಿರಲಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರು ಈ ತಿಂಗಳಆರಂಭದಲ್ಲಿ ಬ್ಲಾಗ್ ಲೇಖನವೊಂದರಲ್ಲಿ ರವಾನಿಸಿದ್ದ ಸೂಕ್ಷ್ಮ ಸಂದೇಶವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರತಿಧ್ವನಿಸಿದ್ದಾರೆ. 

ಗುರುವಾರ ಆಂಗ್ಲ ಸುದ್ದಿವಾಹಿನಿಯೊಂದಿಗೆಮಾತನಾಡಿದ ಅವರು,ವಿಭಿನ್ನ ಅಭಿಪ್ರಾಯಗಳನ್ನು ನಾವು ಗೌರವಿಸಬೇಕು. ಅದು ಪ್ರಜಾಪ್ರಭುತ್ವದ ನಿಜವಾದ ಸ್ಫೂರ್ತಿಯಾಗಿದೆ ಎಂದು ಹೇಳಿದರು. ಆಡ್ವಾಣಿಯವರ ಬ್ಲಾಗ್ ಲೇಖನದ ಕುರಿತು ಗಡ್ಕರಿಯವರ ಪ್ರತಿಕ್ರಿಯೆಯನ್ನು ಕೋರಲಾಗಿತ್ತು. ಈ ಲೇಖನವು ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಬಳಿಕ ಆಡ್ವಾಣಿಯವರಬಂಡಾಯದ ಸೂಚನೆ ಎಂದು ಪರಿಗಣಿಸಲಾಗಿತ್ತು.

ಬಿಜೆಪಿಯು ಸ್ಥಾಪನೆಯಾದಾಗಿನಿಂದಲೂ ನಮ್ಮ ರಾಜಕೀಯ ಎದುರಾಳಿಗಳನ್ನು ‘ಶತ್ರುಗಳು’ ಎಂದು ಅದೆಂದೂ ಪರಿಗಣಿಸಿಲ್ಲ, ಅವರು ನಮ್ಮ ‘ವಿರೋಧಿಗಳು’ ಎಂದೇ ಅದುಭಾವಿಸಿತ್ತು. ಭಾರತೀಯ ರಾಷ್ಟ್ರವಾದದ ನಮ್ಮ ಪರಿಕಲ್ಪನೆಯಲ್ಲಿ ರಾಜಕೀಯವಾಗಿ ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದವರನ್ನು ರಾಷ್ಟ್ರ ವಿರೋಧಿಗಳು ಎಂದು ನಾವೆಂದಿಗೂಪರಿಗಣಿಸಿಲ್ಲ ಎಂದು ಆಡ್ವಾಣಿ ಬರೆದಿದ್ದರು.

ನಮ್ಮೊಂದಿಗೆ ಸೇರದವರನ್ನು ರಾಷ್ಟ್ರವಿರೋಧಿಗಳು ಎಂದು ಕರೆಯಲು ನಾವು ಬಯಸುವುದಿಲ್ಲ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಅವರ ಹಕ್ಕು ಆಗಿದೆ ಮತ್ತು ಇದರಲ್ಲಿನಮಗೆ ಯಾವುದೇ ಸಮಸ್ಯೆಯಿಲ್ಲ, ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ ಎಂದು ನಾವು ಸದಾ ಹೇಳುತ್ತಿರುತ್ತೇವೆ ಎಂದರು.
ಬಿಜೆಪಿಯ ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಲು ಮುಕ್ತ ಅವಕಾಶವೇನಾದರೂ ಏರ್ಪಟ್ಟರೆ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಭೀರ ಸವಾಲು ಒಡ್ಡಬಹುದು ಎಂಬಊಹಾಪೋಹಗಳ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News