ಬಂಟ್ವಾಳದಲ್ಲಿ 2ನೆ ಹಂತದ ಕಾಂಗ್ರೆಸ್ ಮತಯಾಚನೆ

Update: 2019-04-11 17:26 GMT

ಬಂಟ್ವಾಳ, ಎ. 11: ಕಳೆದ 28 ವರ್ಷಗಳಲ್ಲಿ ಬಿಜೆಪಿ ಭದ್ರಕೊಟೆಯಾಗಿರುವ ದ.ಕ.ಜಿಲ್ಲೆಯನ್ನು ಪರಿವರ್ತನೆ ಮಾಡುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.

ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಗುರುವಾರ ಬಂಟ್ವಾಳ ತಾಲೂಕಿನ ಬಡ್ಡಕಟ್ಟೆ ಹನುಮಂತ ದೇವಾಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಂಟ್ವಾಳ ಪೇಟೆಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. 

ಕಾರ್ಯಕರ್ತರು ಹಾಗೂ ಮತದಾರರು ತನ್ನ ಮೇಲೆ ಇಟ್ಟಿರುವ ವಿಶ್ವಾಸ, ನಂಬಿಕೆ, ಗೌರವಕ್ಕೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡ್ಯೋತ್ತೇನೆ. ಇದಕ್ಕಾಗಿ ತನಗೆ ಅವಕಾಶ ಕೊಡಿ ಎಂದು ಅವರು ಮನವಿ ಮಾಡಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅಭಿವೃದ್ಧಿಗಾಗಿ ಯುವಕ ಮಿಥುನ್ ರೈ ಅವರಿಗೆ ಬೆಂಬಲ ನೀಡಬೇಕು. ದ.ಕ.ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಪರಿವರ್ತನೆಗಾಗಿ ಕಾಂಗ್ರೆಸ್‍ಗೆ ಮತ ನೀಡಿ ಎಂದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಕರ್ ಜೈನ್, ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಸುದರ್ಶನ ಜೈನ್, ಅಬ್ಬಾಸ್ ಅಲಿ, ವಾಸು ಪೂಜಾರಿ, ಗಂಗಾಧರ ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಬೇಬಿ ಕುಂದರ್, ಸುದೀಪ್ ಶೆಟ್ಟಿ, ಬಿ.ಎಚ್.ಖಾದರ್, ಚಿತ್ತರಂಜನ್ ಶೆಟ್ಟಿ, ಜೆ.ಡಿ.ಎಸ್.ಪ್ರಮುಖರಾದ ಬಿ.ಮೋಹನ್, ಹಾರೂನ್ ರಶೀದ್, ಪಿ.ಎ.ರಹೀಂ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News