ಊರ್ಮಿಳಾ ಮಾತೋಂಡ್ಕರ್ ಮುಖ ನೋಡಿ ಟಿಕೆಟ್: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

Update: 2019-04-11 17:37 GMT

ಹೊಸದಿಲ್ಲಿ, ಎ. 11: ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟಿ ಊರ್ಮಿಳಾ ಮಾತೋಂಡ್ಕರ್ ವಿರುದ್ಧ ಬಿಜೆಪಿ ಸಂಸದರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ಮಾತೋಂಡ್ಕರ್ ಅವರ ಮುಖ ನೋಡಿ, ಅವರು ಸೆಲೆಬ್ರೆಟಿಯಾಗಿರುವ ಕಾರಣಕ್ಕಾಗಿ ರಾಜಕೀಯಕ್ಕೆ ಎಳೆದು ತರಲಾಗಿದೆ” ಎಂದು ಮುಂಬೈ ಉತ್ತರದ ಸಂಸದ ಗೋಪಾಲ ಶೆಟ್ಟಿ ಹೇಳಿದ್ದಾರೆ.

“ಊರ್ಮಿಳಾ ಮಾತೋಂಡ್ಕರ್ ಅವರನ್ನು ಯಾರು ರಾಜಕೀಯಕ್ಕೆ ತಂದರು, ಅವರು ಸೆಲೆಬ್ರೆಟಿ. ಅವರ ಮುಖ ನೋಡಿ ರಾಜಕೀಯಕ್ಕೆ ತರಲಾಯಿತು. ಆದುದರಿಂದ ಯಾರೂ ಆಕ್ಷೇಪ ವ್ಯಕ್ತಪಡಿಸಲು ಕಾರಣವೇ ಇಲ್ಲ. ಅವರು ರಾಜಕಾರಣಿಗಳ ಕುಟುಂಬದಿಂದ ಬಂದವರು, ಅವರು ರಾಜಕೀಯ ಅರ್ಥ ಮಾಡಿಕೊಳ್ಳಬಲ್ಲರು, ಆದರೆ, ಅವರು ಆಯ್ಕೆ ಮಾಡಿದ ಪಕ್ಷ ಮಾತ್ರ ಕೆಟ್ಟದು” ಎಂದು ಗೋಪಾಲ್ ಶೆಟ್ಟಿ ಹೇಳಿದ್ದಾರೆ.

 65 ವರ್ಷದ ಗೋಪಾಲ್ ಶೆಟ್ಟಿ ತಮ್ಮ ಹೇಳಿಕೆಗಾಗಿ ಹಲವು ಬಾರಿ ವಿವಾದಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ಅವರು ಮಾಂತೋಡ್ಕರ್ ಮುಗ್ಧ ಹುಡುಗಿ. ಅವರು ರಾಜಕೀಯದಲ್ಲಿ ಶೂನ್ಯ ಎಂದು ಹೇಳಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕ್ರೈಸ್ತರು ಪ್ರಮುಖ ಪಾತ್ರ ವಹಿಸಿಲ್ಲ ಎಂದು ಅವರು ಕಳೆದ ವರ್ಷ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಒಳಗಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News