ಪಾಕ್ ಪೈಲಟ್‌ಗಳಿಗೆ ರಫೇಲ್ ವಿಮಾನ ಹಾರಾಟ ತರಬೇತಿ ಸುಳ್ಳು ಸುದ್ದಿ: ಫ್ರಾನ್ಸ್

Update: 2019-04-11 17:58 GMT

ಪ್ಯಾರಿಸ್, ಎ. 11: ಕತರ್ ಜೊತೆಗಿನ ವಿನಿಮಯ ಕಾರ್ಯಕ್ರಮದನ್ವಯ ಪಾಕಿಸ್ತಾನಿ ಪೈಲಟ್‌ಗಳು ರಫೇಲ್ ಯುದ್ಧವಿಮಾನಗಳ ಹಾರಾಟದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂಬ ವರದಿಗಳನ್ನು ಫ್ರಾನ್ಸ್ ನಿರಾಕರಿಸಿದೆ.

‘‘ಅದು ಸುಳ್ಳು ಸುದ್ದಿ ಎಂಬುದಾಗಿ ನಾನು ಹೇಳಬಲ್ಲೆ’’ ಎಂದು ಭಾರತಕ್ಕೆ ಫ್ರಾನ್ಸ್ ರಾಯಭಾರಿ ಅಲೆಕ್ಸನ್ ಝೈಗ್ಲರ್ ಟ್ವೀಟ್ ಮಾಡಿದ್ದಾರೆ.

ರಫೇಲ್ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳುವ ಮೊದಲೇ ಪಾಕಿಸ್ತಾನಿ ಪೈಲಟ್‌ಗಳು ಅವುಗಳ ಮೇಲೆ ಕೈಯಾಡಿಸಿದ್ದಾರೆ ಎಂಬ ಊಹಾಪೋಹಗಳಿಗೆ ಅವರು ಈ ಮೂಲಕ ತೆರೆಯೆಳೆದಿದ್ದಾರೆ.

ಕತರ್ ಕೂಡ ರಫೇಲ್ ವಿಮಾನಗಳನ್ನು ಖರೀದಿಸಲು ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2017ರಲ್ಲಿ ಕತರ್ ಪರವಾಗಿ ತರಬೇತಿ ಪಡೆದ ಮೊದಲ ಗುಂಪಿನ ಪೈಲಟ್‌ಗಳು ವಿನಿಮಯ ಕಾರ್ಯಕ್ರಮದಡಿ ಕತರ್‌ಗೆ ಹೋಗಿದ್ದ ಪಾಕಿಸ್ತಾನಿ ಪೈಲಟ್‌ಗಳಾಗಿದ್ದರು ಎಂಬುದಾಗಿ ಫೆಬ್ರವರಿಯಲ್ಲಿ ‘ಎಐಎನ್ ಆನ್‌ಲೈನ್’ ವರದಿಯೊಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News