ಈ ಬಾರಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪದವೀಧರೆ ಅಲ್ಲ … !

Update: 2019-04-12 05:19 GMT

ಹೊಸದಿಲ್ಲಿ, ಎ.12: ಕಳೆದ ಲೋಕಸಭಾ ಚುನಾವಣೆಯ ವೇಳೆ ನಾಮಪತ್ರ ಸಲ್ಲಿಸುವಾಗ  ನೀಡಿದ ಅಫಿಡವಿಟ್ ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪದವೀಧರೆ ಎಂದು ಮಾಹಿತಿ ನೀಡಿದ್ದರು.  ಆದರೆ ಬಾರಿ ತಾನು ಪದವೀಧರೆ ಅಲ್ಲ ಎಂದು  ಮಾಹಿತಿ ಒದಗಿಸಿದ್ದಾರೆ.

ಅಮೇಠಿ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿರುವ ಸ್ಮೃತಿ ಇರಾನಿ  ಗುರುವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇವರಿಗೆ ಎದುರಾಳಿಯಾಗಿದ್ದಾರೆ.

ಅಫಿಡವಿಟ್ ನಲ್ಲಿ  1991ರಲ್ಲಿ ಸೆಕೆಂಡರಿ ಸ್ಕೂಲ್ ಪರೀಕ್ಷೆ ಮತ್ತು 1993ರಲ್ಲಿ ಸೀನಿಯರ್ ಸೆಕೆಂಡರು ಸ್ಕೂಲ್ ಪರೀಕ್ಷೆ ಪಾಸಾಗಿರುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ. 1994ರಲ್ಲಿ ದಿಲ್ಲಿ ಮುಕ್ತ ವಿವಿಯ ಮೂರು ವರ್ಷಗಳ ಬಿ.ಕಾಂ ಪದವಿಯ ಮೊದಲ ವರ್ಷದ ಕೋರ್ಸ್ ಪೂರ್ಣಗೊಳಿಸಿಲ್ಲ ಎಂಬ ವಿವರ ನೀಡಿದ್ದಾರೆ. 2014ರ  ಚುನಾವಣೆಯ ವೇಳೆ ಪದವೀಧರೆ ಎಂದು ಸುಳ್ಳು ಮಾಹಿತಿ  ನೀಡಿ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ಆಕೆ ಪದವೀಧರೆ ಅಲ್ಲವೆಂದು ವಿಪಕ್ಷಗಳು ವಾದಿಸಿತ್ತು. ಇದೊಂದು ವಿವಾದಕ್ಕೆ ಕಾರಣವಾಗಿತ್ತು.

ಸ್ಮೃತಿ ಇರಾನಿ 4.71 ಮೌಲ್ಯದ ಆಸ್ತಿ ಹೊಂದಿದ್ದಾರೆ. ಚರಾಸ್ತಿ ಮೌಲ್ಯ 1.75 ಕೋಟಿ ರೂ, ಸ್ಥಿರಾಸ್ತಿ  2.96 ಕೋಟಿ ರೂ. 1.50 ಕೋಟಿ ಮೌಲ್ಯದ ಮನೆ,  ಕೈಯಲ್ಲಿ ನಗದು ಮಾ.31ಕ್ಕೆ 6.24 ಲಕ್ಷ ರೂ. ಬ್ಯಾಂಕ್ ನಲ್ಲಿ  ಠೇವಣಿ 89 ಲಕ್ಷ ರೂ. ಇರುವುದಾಗಿ ಘೋಷಿಸಿದ್ದಾರೆ.

ಎಸ್ ಎಸ್ ಸಿ ಮತ್ತು ಅಂಚೆ ವಿಮೆ 18 ಲಕ್ಷ ರೂ.  ಮತ್ತು ಹೂಡಿಕೆ 1.05 ಲಕ್ಷ ರೂ,  13.14 ಲಕ್ಷ ಮೌಲ್ಯದ ವಾಹನ ಮತ್ತು 21 ಲಕ್ಷ ರೂ.ಮೌಲ್ಯದ  ಚಿನ್ನಾಭರಣ , ಯಾವುದೇ ಸಾಲ ಪಡೆದಿಲ್ಲ.  ಯಾವುದೇ  ಎಫ್ ಐಆರ್  ತನಿಖೆಗೆ ಬಾಕಿ ಇಲ್ಲ.

ಪತಿ ಝುಬಿನ್ ಹೆಸರಲ್ಲಿ ಚರಾಸ್ತಿ 1.69 ಕೋಟಿ ರೂ. ಮತ್ತು 2.97 ಕೋಟಿ ಮೌಲ್ಯದ ಸ್ಥಿರಾಸ್ತಿ  ಇರುವುದಾಗಿ ಸ್ಮೃತಿ ಇರಾನಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News