ಶಾಂತಿಗಾಗಿ ಮನವಿ ಮಾಡಿ ದಕ್ಷಿಣ ಸುಡಾನ್ ನಾಯಕರ ಶೂಗೆ ಚುಂಬಿಸಿದ ಪೋಪ್ ಫ್ರಾನ್ಸಿಸ್ !

Update: 2019-04-12 16:26 GMT

ಹೊಸದಿಲ್ಲಿ, ಎ.12: ‘ನಿಮ್ಮ ನಡುವೆ ಶಾಂತಿ ಕಾಪಾಡಿಕೊಳ್ಳಿ’ ಎಂದು ಮನವಿ ಮಾಡಿದ ಪೋಪ್ ಫ್ರಾನ್ಸಿಸ್ ದಕ್ಷಿಣ ಸುಡಾನ್ ನ ಸರಕಾರ ಮತ್ತು ವಿಪಕ್ಷ ನಾಯಕರಿಬ್ಬರ ಶೂಗೆ ಚುಂಬಿಸಿದ ಅಚ್ಚರಿಯ ಘಟನೆ ನಡೆದಿದೆ. ಕ್ರೈಸ್ತರ ಪರಮೋಚ್ಛ ಗುರುಗಳ ಈ ದಿಢೀರ್ ನಡೆಯಿಂದ ಇಬ್ಬರು ನಾಯಕರೂ ವಿಚಲಿತರಾದರು.

“ನಾನು ಇದನ್ನು ನನ್ನ ಹೃದಯದಿಂದ ಕೇಳುತ್ತಿದ್ದೇನೆ”  ಎಂದು ಅಧ್ಯಕ್ಷ ಸಲ್ವಾ ಕಿರ್ ಮತ್ತು ವಿಪಕ್ಷ ನಾಯಕ ರೀಕ್ ಮಚಾರ್ ಅವರಿಗೆ ಹೇಳಿದ ಪೋಪ್ ‘ಶಾಂತಿ ಕಾಯ್ದುಕೊಳ್ಳಿ” ಎಂದು ಮನವಿ ಮಾಡಿದರು.

ಇಬ್ಬರು ನಾಯಕರು ವ್ಯಾಟಿಕನ್ ಗೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ.

ದಕ್ಷಿಣ ಸುಡಾನ್‌ನ ಅಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕರ ಜೊತೆ ವ್ಯಾಟಿಕನ್‌ನಲ್ಲಿ ಎರಡು ದಿನಗಳ ರಹಸ್ಯ ಸಭೆ ನಡೆಸಿದ ಪೋಪ್ ಫ್ರಾನ್ಸಿಸ್, ಹೆಚ್ಚುತ್ತಿರುವ ಭಿನ್ನಮತಗಳ ಹೊರತಾಗಿಯೂ ಶಾಂತಿ ಒಪ್ಪಂದವನ್ನು ಮುನ್ನಡೆಸಿಕೊಂಡು ಹೋಗುವಂತೆ ಮನವಿ ಮಾಡಿದರು.

ಕಾಲು ನೋವಿನಿಂದ ಬಳಲುತ್ತಿರುವ 82 ವರ್ಷದ ಪೋಪ್, ಆಫ್ರಿಕ ನಾಯಕರು ಮತ್ತು ಕೋಣೆಯಲ್ಲಿದ್ದ ಇತರ ಹಲವರ ಶೂಗಳನ್ನು ಚುಂಬಿಸಲು ಕಷ್ಟಪಟ್ಟು ಮೊಣಕಾಲೂರಿದಾಗ ಅಲ್ಲಿದ್ದವರು ದಂಗಾದರು. ಈ ಸಂದರ್ಭದಲ್ಲಿ ಪೋಪ್‌ರ ಸಹಾಯಕರು ಅವರಿಗೆ ಸಹಾಯ ಮಾಡಿದರು.

 ಪೋಪ್ ಪವಿತ್ರ ಗುರುವಾರದಂದು ಕೈದಿಗಳ ಪಾದ ತೊಳೆಯುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಅವರು ಎಂದೂ ರಾಜಕೀಯ ನಾಯಕರಿಗೆ ಈ ರೀತಿಯ ಗೌರವವನ್ನು ನೀಡಿಲ್ಲ.

ಪೋಪ್ ಜೊತೆಗಿನ ಸಭೆಯಲ್ಲಿ ದಕ್ಷಿಣ ಸುಡಾನ್ ಅಧ್ಯಕ್ಷ ಸಲ್ವ ಕೀರ್ ಮತ್ತು ಪ್ರತಿಪಕ್ಷ ನಾಯಕ ರೀಕ್ ಮಚರ್ ಭಾಗವಹಿಸಿದ್ದಾರೆ. ಕೀರ್‌ರ ಮೂವರು ಉಪಾಧ್ಯಕ್ಷರೂ ಭಾಗವಹಿಸಿದ್ದರು. ಪೋಪ್ ಎಲ್ಲರ ಪಾದಗಳನ್ನು ಚುಂಬಿಸಿದ್ದಾರೆ.

ಪೋಪ್ ಫ್ರಾನ್ಸಿಸ್‌ರ ನಡವಳಿಕೆಯಿಂದ ನಾನು ಗಾಢ ಪ್ರಭಾವಕ್ಕೊಳಗಾಗಿದ್ದೇನೆ ಎಂದು ಉಪಾಧ್ಯಕ್ಷೆ ರೆಬೆಕಾ ನ್ಯಾಂಡೆಂಗ್ ಗರಂಗ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News