ಕುಂದಾಪುರ: ಮತದಾನ ಕುರಿತು ಬೀದಿ ನಾಟಕ
Update: 2019-04-12 20:25 IST
ಉಡುಪಿ, ಎ.12: ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ ಹಾಗೂ ಕುಂದಾಪುರ ಪುರಸಭೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕುಂದಾಪುರದ ಶಾಸ್ತ್ರೀ ಸರ್ಕಲ್ ಬಸ್ ನಿಲ್ದಾಣದಲ್ಲಿ ಮತದಾನ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದರ ಅಂಗವಾಗಿ ಅಲ್ಲಿ ಚುನಾವಣೆಯ ಜಾಗೃತಿಗೆ ಸಂಬಂಧಿಸಿ ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಯಿತು. ಪಾತ್ರದಾರಿಗಳ ಮನೋಜ್ಞ ಅಭಿನಯ ದಿಂದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.