ಗುಜರಾತ್: ಜಾನುವಾರು ರಫ್ತು ನಿಷೇಧ ಆದೇಶ ರದ್ದು

Update: 2019-04-12 14:56 GMT

ಅಹ್ಮದಾಬಾದ್, ಎ. 12: ಟುನಾ ಬಂದರಿನಿಂದ ಜಾನುವಾರು ರಫ್ತು ನಿಷೇಧಿಸುವ ರಾಜ್ಯ ಸರಕಾರ ಮೂರು ಅಧಿಸೂಚನೆಯನ್ನು ಗುಜರಾತ್ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಹರ್ಷ ದೇವಾನಿ ಹಾಗೂ ಭಾರ್ಗವ್ ಕರಿಯಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಕಳೆದ ವಾರ ಈ ಆದೇಶ ಜಾರಿ ಮಾಡಿದೆ.

ಟುನಾ ಬಂದರಿನಿಂದ ಜಾನುವಾರುಗಳ ರಫ್ತನ್ನು ವಿರೋಧಿಸುತ್ತಿರುವ ಸಮಾಜದ ಒಂದು ಗುಂಪನ್ನು ತುಷ್ಟೀಕರಿಸಲು ಸರಕಾರ ಕಾಲಕಾಲಕ್ಕೆ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಕಚ್ಛ್‌ನ ಟುನಾ ಬಂದರಿನಿಂದ ಜಾನುವಾರು ರಫ್ತು ನಿಷೇಧಿಸಿ 2018 ಡಿಸೆಂಬರ್‌ನಲ್ಲಿ ರಾಜ್ಯ ಸರಕಾರ ಹಲವು ಅಧಿಸೂಚನೆಗಳನ್ನು ನೀಡಿದ ಬಳಿಕ ಹಲವು ಜಾನುವಾರು ರಫ್ತುದಾರರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಈ ಬಂದರಿನಿದ ಜಾನುವಾರುಗಳ ರಫ್ತು ಮಾಡಲು ತನ್ನ ಸರಕಾರ ಅವಕಾಶ ನೀಡುವುದಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಡಿಸೆಂಬರ್‌ನಲ್ಲಿ ಘೋಷಿಸಿದ್ದರು ಎಂದು ಉಚ್ಚ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News