ಗೇಟ್ಸ್ ಕೇಂಬ್ರಿಜ್ ಸ್ಕಾಲರ್‌ಶಿಪ್‌ಗೆ 7 ಭಾರತೀಯರ ಆಯ್ಕೆ
ಲಂಡನ್, ಎ. 12: ಜಗತ್ತಿನಾದ್ಯಂತ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿರುವ ಹಾಗೂ ಸಾಮಾಜಿಕ ಬದ್ಧತೆ ಹೊಂದಿರುವ 90 ಮಂದಿ ಸ್ನಾತಕೋತ್ತರ ಪದವೀಧರರಿಗೆ 2019ರ ‘ಗೇಟ್ಸ್ ಕೇಂಬ್ರಿಜ್ ಸ್ಕಾಲರ್‌ಶಿಪ್’ ನೀಡಲಾಗಿದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯ ಗುರುವಾರ ಪ್ರಕಟಿಸಿದೆ.
ಈ ಪೈಕಿ ಏಳು ಮಂದಿ ಭಾರತೀಯರು. ಅವರೆಂದರೆ: ಅರ್ಜುನ್ ಅಶೋಕ (ಭೌತಶಾಸ್ತ್ರದಲ್ಲಿ ಪಿಎಚ್‌ಡಿ), ಕಾನುಪ್ರಿಯ ಶರ್ಮ (ಕ್ರಿಮಿನಾಲಜಿಯಲ್ಲಿ ಪಿಎಚ್‌ಡಿ), ರೀತಿಕಾ ಸುಬ್ರಮಣಿಯನ್ (ಮಲ್ಟಿ-ಡಿಸಿಪ್ಲಿನರಿ ಜಂಡರ್ ಸ್ಟಡೀಸ್‌ನಲ್ಲಿ ಪಿಎಚ್‌ಡಿ), ಅವನಿ ವಿಯೇರ (ಇಂಗ್ಲಿಷ್‌ನಲ್ಲಿ ಪಿಎಚ್‌ಡಿ), ನೀತಿಕಾ ಮುಮ್ಮಿದಿವಪರು (ಹಿಸ್ಟರಿ ಮತ್ತು ಫಿಲಾಸಫಿ ಆಫ್ ಸಯನ್ಸ್‌ನಲ್ಲಿ ಎಂಫಿಲ್), ನಿಶಾಂತ್ ಗೋಖಲೆ (ಲೀಗಲ್ ಸ್ಟಡೀಸ್‌ನಲ್ಲಿ ಪಿಎಚ್‌ಡಿ) ಮತ್ತು ಧ್ರುವ ನಂದಮುಡಿ (ಬಯಾಲಜಿಕಲ್ ಸಯನ್ಸ್‌ನಲ್ಲಿ ಪಿಎಚ್‌ಡಿ).
ಈ ಅಂತರ್‌ರಾಷ್ಟ್ರೀಯ ಸ್ಪರ್ಧಾತ್ಮಕ ಸ್ನಾತಕೋತ್ತರ ಸ್ಕಾಲರ್‌ಶಿಪ್ ಕಾರ್ಯಕ್ರಮವನ್ನು 2000ರಲ್ಲಿ ಆರಂಭಿಸಲಾಯಿತು. ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಈ ಕಾರ್ಯಕ್ರಮಕ್ಕೆ 210 ಮಿಲಿಯ ಡಾಲರ್ (ಸುಮಾರು 1,453 ಕೋಟಿ ರೂಪಾಯಿ) ದೇಣಿಗೆ ನೀಡಿದೆ.