ಪ್ರತಿಭಟನಕಾರರನ್ನು ಬಿಡಿ

Update: 2019-04-12 16:48 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಎ. 12: ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದುದಕ್ಕಾಗಿ ಬಂಧಿಸಲ್ಪಟ್ಟಿರುವ ಜನರನ್ನು ಸುಡಾನ್ ಅಧಿಕಾರಿಗಳು ಬಿಡುಗಡೆ ಮಾಡಬೇಕು ಹಾಗೂ ಡಿಸೆಂಬರ್‌ನಿಂದ ನಡೆಯುತ್ತಿರುವ ಪ್ರತಿಭಟನಾ ಪ್ರದರ್ಶನಗಳ ವಿರುದ್ಧ ಬಲಪ್ರಯೋಗ ನಡೆಸಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥೆ ಮಿಶೆಲ್ ಬ್ಯಾಚಲೆಟ್ ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ಕರೆ ನೀಡಿದ್ದಾರೆ.

‘‘ಇದು ಸುಡಾನ್‌ನ ಅತ್ಯಂತ ಕಠಿಣ ಹಾಗೂ ಅಸ್ಥಿರ ಕ್ಷಣಗಳು. ದೇಶದ ಭವಿಷ್ಯದ ಬಗ್ಗೆ ತೀವ್ರ ಅನಿಶ್ಚಿತತೆ ಮತ್ತು ಕಳವಳಗಳಿವೆ’’ ಎಂದು ಅವರು ಹೇಳಿದರು. ಶಾಂತಿಯುತ ಪ್ರತಿಭಟನಕಾರರ ವಿರುದ್ಧ ಬಲ ಪ್ರಯೋಗಿಸುವುದರಿಂದ ಅಧಿಕಾರಿಗಳು ಹಿಂದೆ ಸರಿಯಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News