ದಕ್ಷಿಣ ಕೊರಿಯ: ಗರ್ಭಪಾತ ನಿಷೇಧ ಕಾನೂನು ರದ್ದು

Update: 2019-04-12 16:51 GMT

 ಸಿಯೋಲ್ (ದಕ್ಷಿಣ ಕೊರಿಯ), ಎ. 12: ಗರ್ಭಪಾತವು ಎರಡು ವರ್ಷಗಳ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧ ಎಂಬ 66 ವರ್ಷಗಳ ಹಿಂದಿನ ಕಾನೂನು ಅಸಾಂವಿಧಾನಿಕ ಎಂಬುದಾಗಿ ದಕ್ಷಿಣ ಕೊರಿಯದ ಸಾಂವಿಧಾನಿಕ ನ್ಯಾಯಾಲಯವೊಂದು ಗುರುವಾರ ತೀರ್ಪು ನೀಡಿದೆ.

ಈ ಕಠಿಣ ಹಾಗೂ ವಿವಾದಾಸ್ಪದ ಕಾನೂನಿನ ರದ್ದತಿಗಾಗಿ ನಿರಂತರವಾಗಿ ಹೋರಾಡಿದ ಜನರಿಗೆ ಲಭಿಸಿದ ಮಹತ್ವದ ವಿಜಯ ಇದಾಗಿದೆ.

ಪ್ರಸೂತಿ ತಜ್ಞೆಯೊಬ್ಬರು 2017ರಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಒಂಬತ್ತು ನ್ಯಾಯಾಧೀಶರ ಪೀಠವು, 7-2ರ ಬಹುಮತದ ತೀರ್ಪನ್ನು ನೀಡಿದೆ. ಹಲವಾರು ಗರ್ಭಪಾತಗಳನ್ನು ನೆರವೇರಿಸಿರುವುದಕ್ಕಾಗಿ ಈ ಪ್ರಸೂತಿ ತಜ್ಞೆ ವಿಚಾರಣೆ ಎದುರಿಸುತ್ತಿದ್ದರು.

ಗರ್ಭಪಾತ ನಿಷೇಧ ಕಾನೂನು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದ ನ್ಯಾಯಪೀಠವು, ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News