ಪೊಸೋಟು ಮಹಲ್ ಯೂತ್ ವಿಂಗ್ ವತಿಯಿಂದ ಸಾಮೂಹಿಕ ಉಚಿತ ಮುಂಜಿ ಕಾರ್ಯಕ್ರಮ

Update: 2019-04-12 17:25 GMT

ಮಂಜೇಶ್ವರ : ಪೊಸೋಟು ಮಹಲ್ ಯೂತ್ ವಿಂಗ್ ಸಂಘಟನೆ ವತಿಯಿಂದ ಉಚಿತ ವೈದ್ಯಕೀಯ ಶಿಬಿರ, ಪ್ರಳಯ ಬಾಧಿತರಿಗೆ ಸಹಾಯ, ಅನಾಥಾಲಯಕ್ಕೆ ಆಹಾರ ಸಾಮಗ್ರಿ ವಿತರಣೆ ಹಾಗು 61 ಮಕ್ಕಳ ಉಚಿತ ಸಾಮಾಹಿಕ ಮುಂಜಿ ಕಾರ್ಯಕ್ರಮ ನಡೆಯಿತು.

ಪೊಸೋಟು ಮಹಲ್ ಯೂತ್ ವಿಂಗ್ ವತಿಯಿಂದ ಪೊಸೋಟಿನಲ್ಲಿರುವ ಮಂತ್ರಿ ಮಹಲ್ ನಲ್ಲಿ ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮ ನಡೆಯಿತು.  ಇದರ ಮುಂದುವರಿದ ಭಾಗವಾಗಿ ಶುಕ್ರವಾರ  ಪೊಸೋಟು ಮಂತ್ರಿ ಮಹಲ್ ನಲ್ಲಿ ಒಟ್ಟು ಗೂಡಿದ ಮಕ್ಕಳನ್ನು ಹೊಸ ಉಡುಪುಗಳನ್ನು ಧರಿಸಿ ಜುಮಾ ನಮಾಜಿಗೆ ಕೊಂಡೊಯ್ಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ನಿರ್ಗತಿಕ ಕುಟುಂಬದ ಐದು ಹೆಣ್ಣು ಮಕ್ಕಳನ್ನು ಸಂಘಟನೆಯ ಖರ್ಚಿನಲ್ಲಿ ಉಚಿತವಾಗಿ ಮದುವೆ ಮಾಡಿಕೊಡುವ ಉದ್ದೇಶವನ್ನುಈ ಸಂಘಟನೆ ಇಟ್ಟು ಕೊಂಡಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಸಂಘಟನೆಯ ಅಧ್ಯಕ್ಷ ಮಂತ್ರಿ ಸಿದ್ದೀಖ್ ಪೊಸೋಟು, ಪ್ರಧಾನ ಕಾರ್ಯದರ್ಶಿ ಬಿ ಎಂ ಮನ್ಸೂರ್, ಪದಾಧಿಕಾರಿಗಳಾದ ಪಿ ಕೆ ಕುಂಞಿ ಮೋನು, ಆಸಿಫ್ ಪಿಡಿಪಿ, ಸಮದ್ ಬಿ ಎಂ, ಇಸ್ಮಾಯಿಲ್ ಎ ಎಂ, ಸಿರಾಜ್ ಬಿಎಸ್, ಸಿದ್ದೀಖ್ ಇಸ್ಮಾಯಿಲ್, ಮುನೀರ್ ಎಂ ಎಸ್ ಮೊದಲಾದವರು ಮುಂದಾಳತ್ವ ನೀಡಿದರು.

 ಬಳಿಕ ನಡೆದ ಕಾರ್ಯಕ್ರಮದಲ್ಲಿ ಪೊಸೋಟು ಜಮಾಅತ್ ನ ಮುದರಿಸ್ ಸಯ್ಯದ್ ಜಿಫ್ರಿ ಝೈನುಲ್ ಆಬಿದೀನ್ ತಂಙಳ್, ಖತೀಬ್  ಶರೀಫ್ ಅಶ್ರಫಿ, ಮಜೀದ್ ಬಾಖವಿ, ಜಮಾಅತ್ ಅಧ್ಯಕ್ಷ ಆರ್ ಕೆ ಬಾವ ಹಾಜಿ, ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್, ಎಸ್ ಎಂ ಬಶೀರ್, ವಾರ್ಡ್ ಸದಸ್ಯರಾದ ಬಶೀರ್, ಅಬ್ದುಲ್ಲ ಗುಡ್ಡಕ್ಕೇರಿ ಮೊದಲಾದವರು ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News