×
Ad

ಎ.13ರಂದು ಸನದುದಾನ ಸಮಾರಂಭ

Update: 2019-04-12 23:02 IST

ಮಂಗಳೂರು, ಎ.12: ಅಲಿಫ್ ಅಕಾಡಮಿ ಕೂಳೂರು ಇದರ ಮಹಿಳಾ ಶರೀಅತ್ ಕಾಲೇಜಿನ ಸನದುದಾನ ಸಮಾರಂಭವು ಎ.13ರಂದು ಬೆಳಗ್ಗೆ 10 ಗಂಟೆಗೆ ಅಲಿಫ್ ಅಕಾಡಮಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಮೂರು ವರ್ಷಗಳ ಪದವಿ ಮುಗಿಸಿದ ವಿದ್ಯಾರ್ಥಿನಿಯರಿಗೆ ‘ಅಲ್ ಬಾಹಿರ’ ಪದವಿಯನ್ನು ನೀಡಲಾಗುವುದು. ಅಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಈ ಸಮಾರಂಭದ ಜೊತೆ ಕಳೆದ ಒಂದು ವಾರದಿಂದ ನಡೆಯುತ್ತಿರುವ ‘ಅಲಿಫ್ ಫೆಸ್ಟ್’ನ ಸಮಾರೋಪ ನಡೆಯಲಿದೆ.

ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಾಡಿನ ಪ್ರಮುಖ ಶೈಕ್ಷಣಿಕ ಮುಂದಾಳುಗಳು ಭಾಗವಹಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಬಿ.ಎಂ. ಫಾರೂಕ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯದರ್ಶಿ ಶಾಫಿ ಸಅದಿ ಸನದುದಾನ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News