ಮಜ್ಲಿಸೆ ಇಸ್ಲಾ-ವ-ತಂಝೀಂ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಸ್.ಎಂ. ಸೈಯದ್ ಅಹ್ಮದ್ ಫರ್ವೇಝ್ ಆಯ್ಕೆ

Update: 2019-04-12 17:38 GMT

ಭಟ್ಕಳ: ಇಲ್ಲಿನ ಸಾಮಾಜಿಕ ಸಂಸ್ಥೆಯಾದ ಮಜ್ಲಿಸೆ ಇಸ್ಲಾ-ವ-ತಂಝೀಂ ಇದರ ನೂತನ ಅಧ್ಯಕ್ಷರಾಗಿ ಎಸ್. ಎಂ. ಸೈಯದ್ ಅಹ್ಮದ್ ಫರ್ವೇಝ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೌಲಾನಾ ಅಬ್ದುರ್ ರಕೀಬ್ ಎಂ.ಜೆ. ಆಯ್ಕೆಯಾಗಿದ್ದಾರೆ.

ತಂಝೀಂ ಕಾರ್ಯಾಲಯದಲ್ಲಿ ಮಂಗಳವಾರ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ತಂಝೀಂ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಎಸ್.ಎಂ.ಸೈಯದ್ ಅಝೀಮ್ ಕಾರ್ಯ ನಿರ್ವಹಿಸಿದ್ದರು. 

ಉಳಿದಂತೆ ಪ್ರಥಮ ಉಪಾಧ್ಯಕ್ಷರಾಗಿ ಮೊಹತೆಶಂ ಮೊಹಮ್ಮದ್ ಜಾಫರ್ ಬರ್ನಿ, ದ್ವಿತೀಯ ಉಪಾಧ್ಯಕ್ಷರಾಗಿ ಅತೀಕುರ್ ರೆಹಮಾನ್ ಮುನೀರಿ, ತೃತೀಯ ಉಪಾಧ್ಯಕ್ಷರಾಗಿ ಮೊಹತಿಶಂ ಮೊಹಮ್ಮದ್ ಹಾಶಿಮ್ ಬರ್ನಿ, ಆಡಳಿತ ಕಾರ್ಯದರ್ಶಿಯಾಗಿ ಮೊಹಿದ್ದೀನ್ ಜೀಲಾನಿ ಶಾಬಂದ್ರಿ, ಹಣಕಾಸು ಕಾರ್ಯದರ್ಶಿ ಯಾಗಿ ಡಿ.ಎಫ್.ಮೊಹಮ್ಮದ್ ಸಿದ್ಧಿಕ್, ಲೆಕ್ಕ ಪರಿಶೋಧಕರಾಗಿ ಅಹಿದ್ ಮೊಹತೆಶಂ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News