ಮಂಗಳೂರು ಪೊಲೀಸ್ ವ್ಯಾಪ್ತಿಯಲ್ಲಿ 501 ಮಂದಿ ವಿರುದ್ಧ ಕ್ರಮ: ಸಂದೀಪ್ ಪಾಟೀಲ್

Update: 2019-04-15 12:44 GMT

ಮಂಗಳೂರು, ಎ.15: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮತದಾನ ಕೇಂದ್ರಗಳಲ್ಲಿ ಬೆದರಿಕೆ ಹಾಕುವ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವ ಶಂಕೆಯ ಮೇರೆಗೆ ಸುಮಾರು 501 ವ್ಯಕ್ತಿಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಕಮಿಷನರ್ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಯುವ ನಿಟ್ಟಿನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, 220 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ ಎಂದರು.

ಬಂದೋಬಸ್ತ್ 3 ಸಿಎಆರ್ ತುಕಡಿಯಂತೆ ಒಟ್ಟು 12 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗುವುದು. 4 ಕೆಎಸ್‌ಆರ್‌ಪಿ ತುಕಡಿಯನ್ನು 8 ತುಕಡಿಯನ್ನಾಗಿ ವಿಭಾಗಿಸಿ ತಲಾ ಎರಡರಂತೆ ಒಟ್ಟು 4 ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದೆ.

220 ಸೂಕ್ಷ್ಮ ಮತಗಟ್ಟೆಗಳ ಪೈಕಿ 156ಮತಗಟ್ಟೆಗಳಿಗೆ ಕೇಂದ್ರಿಯ ಪಡೆಗಳು ಕೂಡಾ ಭದ್ರತೆ ಇದ್ದು, ಇನ್ನುಳಿದ ಕ್ರಿಟಿಕಲ್ ಮತಗಟ್ಟೆಗಳಿಗೆ ಮೈಕ್ರೋಒಬ್ಸರ್‌ವರ್ ಮತ್ತು ವೀಡಿಯ ಒಬ್ಸರ್ ವರ್‌ರವರ ಕಣ್ಗಾವಲು ಇದೆ. ಚುನಾವಣೆ ಬಂದೋಬಸ್ತ್ ಪ್ರಯುಕ್ತ ಡಿಸಿಪಿ 2, ಡಿವೈಎಸ್ಪಿ-ಎಸಿಪಿ 7, ಇನ್‌ಸ್ಪೆಕ್ಟರ್ 16, ಪಿಎಸ್‌ಐ 7, ಎಎಸ್‌ಐ 79, ಹೆಚ್‌ಸಿ/ಪಿಸಿ ಮತ್ತು ಹೋಂಗಾರ್ಡ್ ಸಹಿತ ಒಟ್ಟು 1500 ಮತ್ತು ಕೇಂದ್ರಿಯ ಪಡೆಯ 2 ಕಂಪನಿ ಮತ್ತು 8 ಕೆಎಸ್‌ಆರ್‌ಪಿ 12 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಚುನಾವಣೆ ಸಂದರ್ಭ ಯಾವುದೇ ಅಕ್ರಮ ಚಟುವಟಿಕೆ, ಅಹಿತಕರ ಘಟನೆ ಬಗ್ಗೆ ಮಾಹಿತಿ ದೊರೆಯಲ್ಲಿ ಕೂಡಲೇ ನಿಯಂತ್ರಣ ಕೊಠಡಿ 0824-2220800 ಅಥವಾ 100 ಸಂಖ್ಯೆಗೆ ಕರೆ ಮಾಡಿ ತಿಳಿಸಿ. ಮಾಹಿತಿ ನೀಡಿದವರು ಹೆಸರನ್ನು ಗೌಪ್ಯಾಗಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹನುಮಂತರಾಯ, ಸಂಚಾರ ಮತ್ತು ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮೀಗಣೇಶ್ ಉಪಸ್ಥಿತರಿದ್ದರು.

28,25,295 ರೂ. ವಶ

ನಗರ ವ್ಯಾಪ್ತಿಯಲ್ಲಿ ಹಾಗೂ ಅಂತಾರಾಜ್ಯ ಗಡಿಭಾಗದಲ್ಲಿ 21ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದುಘಿ, ಇವುಗಳಲ್ಲಿ 10ಎಸ್‌ಎಸ್‌ಟಿ ಮತ್ತು 11 ಪೊಲೀಸ್ ಚೆಕ್‌ಪೋಸ್ಟ್‌ಗಳಿವೆ. ಎಎಸ್‌ಟಿ ತಂಡ ಹಾಗೂ ಪ್ಲೈಯಿಂಗ್ ಸರ್ವಲೈನ್ಸ್ ಟೀಮ್ ಕಾರ್ಯಾಚರಣೆ ನಡೆಸಿ 28,25,295ರೂ. ಸ್ವಾಧೀನಪಡಿಸಿಕೊಂಡು ಸೂಕ್ತ ದಾಖಲಾತಿ ಪರಿಶೀಲಿಸಿ ವಿಲೇವಾರಿಗೊಳಿಸಲಾಗಿದೆ.

1500 ಕಿಟ್ ವಿತರಣೆ: ಮಂಗಳೂರು ನಗರ ವ್ಯಾಪ್ತಿಯ ಮತಗಟ್ಟೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡ 1500ಮಂದಿ ಇಲಾಖಾ ಸಿಬ್ಬಂದಿ ಮತ್ತು ಗೃಹರಕ್ಷಕ ಸಿಬ್ಬಂದಿಗೆ ಅವರ ಅವಶ್ಯಕತೆಗೆ ಸಂಬಂಧಿಸಿ 1500 ಕಿಟ್ ಬಾಕ್ಸ್ ನೀಡಲಾಗುತ್ತಿದೆ. ಅದರಲ್ಲಿ ಟೂತ್ ಪೇಸ್ಟ್, ಬ್ರಷ್, ಸೋಪ್, ಬೆಂಕಿ ಪೊಟ್ಟಣ, ಕ್ಯಾಂಡಲ್, ಶೇವಿಂಗ್ ಬ್ಲೇಡ್ ಇಡಲಾಗಿದೆ.

ಗೂಂಡಾಗಳ ಗಡಿಪಾರು, ಮುಚ್ಚಳಿಕೆ

ಮುಂಜಾಗ್ರತಾ ಕ್ರಮವಾಗಿ 17ರೌಡಿಶೀಟರ್‌ಗಳ ಗಡೀಪಾರಿಗೆ ಆದೇಶಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ಚುನಾವಣೆ ಸಂದರ್ಭ ಹಿಂದೆ ನಡೆದ ಘಟನೆಗಳನ್ನು ಆಧರಿಸಿ 430 ರೌಡಿಗಳಿಂದ ಮುಂಜಾಗ್ರತಾ ಕ್ರಮವಾಗಿ ಕಲಂ 107, 109, 110 ಸಿಆರ್‌ಪಿಸಿನಂತೆ ಕಾನೂನು ಸುವ್ಯವಸ್ಥೆ ಭಂಗ ಮಾಡದಂತೆ ಮುಚ್ಚಳಿಕೆ ಪಡೆಯಲಾಗಿದೆ. ನಗರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಸಿದ ಬಗ್ಗೆ 3 ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. 2011 ಆಯುಧಗಳಲ್ಲಿ 1949 ಆಯುಧ ಈಗಾಗಲೇ ಡೆಪಾಸಿಟ್ ಮಾಡಿಸಿಕೊಳ್ಳಲಾಗಿದ್ದುಘಿ, ಕೆಲವೊಂದು ಅತಿ ಅನಿವಾರ್ಯ ಕಾರಣಗಳ ಕೋರಿಕೆಯಂತೆ ಇನ್ನುಳಿದ 62 ಆಯುಗಳಿಗೆ ಡಿಪಾಸಿಟ್ ವಿನಾಯಿತಿ ನೀಡಲಾಗಿದೆ.

ನೀತಿ ಸಂಹಿತೆ ಘೋಷಣೆಯಾದ ಬಳಿಕ 1039 ವಾರಂಟುಗಳು ಕಮಿಷನರೇಟ್‌ನಲ್ಲಿ ಸ್ವೀಕೃತವಾಗಿದ್ದುಘಿ, ಸದ್ರಿ ವಾರಂಟ್‌ಗಳಲ್ಲಿ 846 ವಾರಂಟ್‌ಗಳನ್ನು ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News