ತುಂಬೆ ಪದವಿ-ಪೂರ್ವ ಕಾಲೇಜು: ವಾಣಿಜ್ಯ ವಿಭಾಗ ಶೇ. 100 ಫಲಿತಾಂಶ

Update: 2019-04-15 12:50 GMT
ಆಯಿಷಾ ಶಿಬಾನಾ, ಧೀರಜ್, ಸಂತೋಷ್ 

ಬಂಟ್ವಾಳ, ಎ. 15: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಂಬೆ ಪದವಿ-ಪೂರ್ವ ಕಾಲೇಜಿನಿಂದ 109 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 103 ಮಂದಿ ಉತ್ತೀರ್ಣರಾಗಿ ಶೇ. 95ರಷ್ಟು ಫಲಿತಾಂಶ ಸಾಧಿಸಿದೆ.

ವಾಣಿಜ್ಯ ವಿಭಾಗದಿಂದ 61 ಮಂದಿ ಹಾಜರಾಗಿ 61 ಮಂದಿ ಉತ್ತೀರ್ಣರಾಗುವ ಸತತ 26 ವರ್ಷದಿಂದ ಶೇ. 100 ಫಲಿತಾಂಶ ಸಾಧಿಸಲಾಗಿದೆ. 8 ಮಂದಿ ಡಿಸ್ಟಿಂಕ್ಷನ್, 52 ಮಂದಿ ಪ್ರಥಮ ದರ್ಜೆ, ಒಬ್ಬ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆಯಿಷಾ ಶಿಬಾನಾ ಎಸ್.ಬಿ. ಅವರು 547 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಕಲಾ ವಿಭಾಗದಲ್ಲಿ 20 ವಿದ್ಯಾರ್ಥಿಗಳು ಹಾಜರಾಗಿ 18 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 90ರಷ್ಟು ಫಲಿತಾಂಶ ದಾಖಲಾಗಿದೆ. ಈ ಪೈಕಿ 9 ಮಂದಿ ಪ್ರಥಮ ದರ್ಜೆ, ಐವರು ದ್ವಿತೀಯ ದರ್ಜೆ ಹಾಗೂ 4 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 483 ಅಂಕ ಗಳಿಸಿದ ಧೀರಜ್ ಕುಮಾರ್ ಅವರು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ವಿಜ್ಞಾನ ವಿಭಾಗದಿಂದ 28 ಮಂದಿ ಹಾಜರಾಗಿದ್ದು, 24 ಮಂದಿ ಉತ್ತೀರ್ಣರಾಗಿ ಶೇ. 86ರಷ್ಟು ಫಲಿತಾಂಶ ಸಾಧಿಸಲಾಗಿದೆ. 1 ಡಿಸ್ಟಿಂಕ್ಷನ್, 17ಮಂದಿ ಪ್ರಥಮ ದರ್ಜೆ, 5 ಮಂದಿ ದ್ವಿತೀಯ ದರ್ಜೆಯನ್ನು ಉತ್ತೀರ್ಣರಾಗಿದ್ದಾರೆ. ಸಂತೋಷ್ 534 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News