ಎಸ್ಕೆಎಸ್ಸೆಸ್ಸೆಫ್: ಲೀಡರ್ಸ್ ಮೀಟ್-ತರಬೇತಿ ಶಿಬಿರ

Update: 2019-04-15 13:13 GMT

ಬಂಟ್ವಾಳ, ಎ. 15: ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಸಮಿತಿ ವತಿಯಿಂದ ಲೀಡರ್ಸ್ ಮೀಟ್ ಹಾಗೂ ತರಬೇತಿ ಶಿಬಿರವು ಆಲಡ್ಕ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಬಳಿ ರವಿವಾರ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸ್ವದಖತುಲ್ಲಾ ಫೈಝಿ ದುಆದೊಂದಿಗೆ ಚಾಲನೆ ನೀಡಿದರು. ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ ಕೋಶಾಧಿಕಾರಿ ಪಿ.ಬಿ. ಅಹ್ಮದ್ ಹಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಉಸ್ತಾದ್ ಸ್ವದಖತುಲ್ಲಾ ಫೈಝಿ ಹಾಗೂ ಅಬ್ದುಸ್ಸಮದ್ ಮಾಸ್ಟರ್ ಸಾಲೆತ್ತೂರು ಮಾಹಿತಿ ನೀಡಿದರು.

ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ ಉಪಾಧ್ಯಕ್ಷ ಅಬ್ದುಲ್ ಮಜೀದ್ ಬೋಳಂಗಡಿ, ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ, ಕ್ಲಸ್ಟರ್ ಕಾರ್ಯದರ್ಶಿ ರಿಝ್ವಾನ್ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News