ಉಡುಪಿ ರೈಲ್ವೆ ಪ್ಲಾಟ್‌ಫಾರಂನಲ್ಲಿ ಟಿಕ್‌ ಟೊಕ್ ಶೋ: ಇಬ್ಬರ ಬಂಧನ

Update: 2019-04-15 13:49 GMT

ಉಡುಪಿ, ಎ.15: ಉಡುಪಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ರೈಲು ಬರುವ ಸಂದರ್ಭ ನೃತ್ಯ ಮಾಡುತ್ತ ಟಿಕ್ ಟಾಕ್ ವೀಡಿಯೊ ಮಾಡುತ್ತಿದ್ದ ಇಬ್ಬರನ್ನು ರೈಲ್ವೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೈಲ್ವೆ ಪೊಲೀಸರು ಎ.15ರಂದು ಉಡುಪಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಗಳಿಗೆ ದಂಡ ವಿಧಿಸಿದ ನ್ಯಾಯಾಲಯವು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ರೈಲು ಚಲಿಸುವ ಸಂದರ್ಭ ಅಥವಾ ರೈಲ್ವೆ ಟ್ರ್ಯಾಕ್ ಮೇಲೆ ವೀಡಿಯೊ ಮಾಡುವುದು ಅಪಾಯಕಾರಿಯಾಗಿದ್ದು, ಇದರಿಂದ ಹಲವು ಮಂದಿಗೆ ರೈಲು ಢಿಕ್ಕಿ ಹೊಡೆಯುವ ಮೂಲಕ ಅಥವಾ ರೈಲಿನಿಂದ ಬೀಳುವ ಮೂಲಕ ಸಾವನ್ನಪ್ಪಿದ್ದಾರೆ. ಆದುದರಿಂದ ಈ ರೀತಿಯ ಚಟುವಟಿಕೆಗಳು ತಮಗೆ ಹಾನಿ ಮಾಡುವುದರ ಜೊತೆಗೆ ಇತರ ಪ್ರಯಾಣಿಕರಿಗೂ ಅನಾನುಕೂಲತೆಯನ್ನು ಉಂಟು ಮಾಡುತ್ತದೆ. ಈ ರೀತಿ ವೀಡಿಯೊ ಮಾಡುವುದು ರೈಲ್ವೆ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News