×
Ad

ಮಂಗಳೂರು: ವಿಕಾಸ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

Update: 2019-04-15 22:04 IST

ಮಂಗಳೂರು, ಎ.15: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಗೆ ನಗರದ ವಿಕಾಸ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಿಂದ ಹಾಜರಾದ 418 ವಿದ್ಯಾರ್ಥಿಗಳು ಶೇ.99.52 ಫಲಿತಾಂಶವನ್ನು ದಾಖಲಿಸಿದ್ದಾರೆ.

ವಿಜ್ಞಾನ ವಿಭಾಗದ ಪೃಥ್ವಿ (583), ಕೆ. ವರ್ಷಾ (582), ಶೈವಿಣಿ ಬಿ.ಜಿ. (578), ಸೌಮ್ಯಾ ಎಸ್.ಎ. (576), ಕವನಾ ಜಿ.ಎನ್. (572) ಮತ್ತು ವಾಣಿಜ್ಯ ವಿಭಾಗದ ಶ್ರೇಷ್ಠ ಎಚ್‌ಪಿ (578), ಸಮೀಕ್ಷಾ (577), ಶ್ರವಣ್ ಗೌಡ (576), ಗೌರಿ ಎಚ್.ಆರ್.(576) ಅಂಕಗಳನ್ನು ಗಳಿಸಿದ್ದಾರೆ.

20 ವಿದ್ಯಾರ್ಥಿಗಳು ಶೇ.95ಕ್ಕೂ ಹೆಚ್ಚು ಅಂಕಗಳನ್ನು ಹಾಗೂ 41 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿರುತ್ತಾರೆ. 189 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 220 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News