ತಲಪಾಡಿ: ಫಲಾಹ್ ಪಿಯು ಕಾಲೇಜಿಗೆ ಶೇ.100 ಫಲಿತಾಂಶ
Update: 2019-04-15 22:10 IST
ಮಂಗಳೂರು, ಎ.15: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸಿದ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ತಲಪಾಡಿ ಕೆ.ಸಿರೋಡ್‌ನ ಫಲಾಹ್ ಬಾಲಕಿಯರ ಪದವಿ ಪೂರ್ವ ಕಾಲೇಜು ಸತತ ಎರಡನೇ ಬಾರಿಗೆ ಶೇ.100 ಫಲಿತಾಂಶವನ್ನು ದಾಖಲಿಸಿದೆ.
ಪರೀಕ್ಷೆ ಬರೆದ 24 ವಿದ್ಯಾರ್ಥಿನಿಯರ ಪೈಕಿ 18 ವಿದ್ಯಾರ್ಥಿನಿಯರು ಪ್ರಥಮ, 4 ವಿದ್ಯಾರ್ಥಿನಿಯರು ದ್ವಿತೀಯ ಹಾಗೂ ಇಬ್ಬರು ತೃತೀಯ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿಯರಾದ ಹಝೀನಾ ಡಿ.ಎಚ್ (ಶೇ.81.83), ಖದೀಜಾ ರೈಶೂನ್ (ಶೇ.81.66), ಶಿಹಾನ ಖದೀಜಾ (ಶೇ.81) ಪಡೆದು ಕಾಲೇಜಿನಲ್ಲಿ ಅನುಕ್ರಮವಾಗಿ ಸ್ಥಾನಗಳನ್ನು ಪಡೆದಿರುತ್ತಾರೆ ಎಂದು ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.