ಖೈರಿಯಾ ಶೆಲ್ಟರ್‌ಗೆ ಶೇ.100 ಫಲಿತಾಂಶ
Update: 2019-04-15 22:12 IST
ಮಂಗಳೂರು, ಎ.15: ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ಅಧೀನದಲ್ಲಿರುವ ಖೈರಿಯಾ ಶೆಲ್ಟರ್‌ನ ಅನಾಥ ಮತ್ತು ನಿರ್ಗತಿಕ ಹೆಣ್ಣು ಮಕ್ಕಳ ಸಂಸ್ಥೆಯಿಂದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ 14 ವಿದ್ಯಾರ್ಥಿನಿಯರು ಕೂಡ ತೇರ್ಗಡೆ ಹೊಂದಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ.
ಹಝ್ರತ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 14 ಮಂದಿಯ ಪೈಕಿ ಜಸೀನಾ (525) ಡಿಸ್ಟಿಕ್ಷನ್, ಬದ್ರುನ್ನಿಸಾ (494), ಹಸೀನಾ(478), ರೌಲಾಬಿ(474), ಕಮರುನ್ನಿಸಾ (471), ರಂಝೀನಾ (467), ಉನೈಸಾ(463), ಆಯಿಷತ್ ಸಫೀರಾ (442), ಶಾಕಿರಾ ಬಾನು(442), ನಸೀಬಾ(442), ಮುರ್ಶಿದಾ(433), ಮಮ್ತಾಜ್ ಶಾಹಿನಾ(384) ಪ್ರಥಮ ಶ್ರೇಣಿ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.