ಮೊದಲ ಹಂತದ ಮತದಾನದಲ್ಲಿ ಭಾರೀ ಅಕ್ರಮ: ಚು. ಆಯೋಗಕ್ಕೆ ಸಿಪಿಎಂ ದೂರು

Update: 2019-04-15 16:45 GMT

ಹೊಸದಿಲ್ಲಿ, ಎ.15: ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ,ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ತ್ರಿಪುರಾಗಳಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಿಪಿಎಂ ಸೋಮವಾರ ಚುನಾವಣಾ ಆಯೋಗ(ಇಸಿ)ದ ಮೆಟ್ಟಿಲನ್ನೇರಿದೆ.

ಆಯೋಗದ ಭೇಟಿಗೆ ಮುನ್ನ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು,ಮೊದಲ ಹಂತದ ಮತದಾನದಲ್ಲಿ,ವಿಶೇಷವಾಗಿ ಪ.ಬಂಗಾಳ ಮತ್ತು ತ್ರಿಪುರಾಗಳಲ್ಲಿ ಭಾರೀ ಅಕ್ರಮಗಳು ನಡೆದಿರುವುದು ಹಲವಾರು ಪ್ರಶ್ನೆಗಳನ್ನೆತ್ತಿದೆ. ಈ ಸಂಬಂಧ ಚುನಾವಣಾ ಆಯೋಗವನ್ನು ನಾವು ಭೇಟಿಯಾಗಲಿದ್ದೇವೆ ಎಂದು ಬೆಳಿಗ್ಗೆ ಟ್ವೀಟಿಸಿದ್ದರು.

ಪ.ಬಂಗಾಳದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು,ಮೊದಲ ಹಂತ ಎ.11ರಂದು ಪೂರ್ಣಗೊಂಡಿದೆ. ತ್ರಿಪುರಾದಲ್ಲಿಯೂ ಮೊದಲ ಹಂತದ ಮತದಾನ ಎ.11ರಂದು ನಡೆದಿದ್ದು,ಎ.18ರಂದು ಇನ್ನೊಂದು ಸುತ್ತಿನ ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News