ಜಿಎಸ್‌ಎಲ್‌ವಿ ನಾಲ್ಕನೇ ಹಂತದ ಕಾರ್ಯಕ್ರಮ ಮುಂದುವರಿಕೆಗೆ ಕೇಂದ್ರ ಸಂಪುಟದ ಸಮ್ಮತಿ

Update: 2019-04-15 17:07 GMT

ಹೊಸದಿಲ್ಲಿ, ಎ.15: ಹಾಲಿ ಪ್ರಗತಿಯಲ್ಲಿರುವ ಜಿಎಸ್‌ಎಲ್‌ವಿ ನಾಲ್ಕನೇ ಹಂತದ ಕಾರ್ಯಕ್ರಮದ ಮುಂದುವರಿಕೆಗೆ ಕೇಂದ್ರ ಸಂಪುಟವು ಸೋಮವಾರ ತನ್ನ ಸಮ್ಮತಿಯನ್ನು ನೀಡಿದೆ. 2021-24ರ ನಡುವೆ ಐದು ರಾಕೆಟ್ ಉಡಾವಣೆಗಳನ್ನು ಈ ಕಾರ್ಯಕ್ರಮವು ಒಳಗೊಂಡಿದೆ.

ನಾಲ್ಕನೇ ಹಂತವು ಭೂ ಚಿತ್ರೀಕರಣ,ಪಥ ನಿರ್ದೇಶನ,ಮಾಹಿತಿ ಪ್ರಸಾರ ಸಂವಹನ ಇತ್ಯಾದಿಗಳಿಗಾಗಿ ಎರಡು ಟನ್ ವರ್ಗದ ಉಪಗ್ರಹಗಳ ಉಡಾವಣೆಯನ್ನು ಸಾಧ್ಯವಾಗಿಸಲಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ನಾಲ್ಕನೇ ಹಂತಕ್ಕಾಗಿ 2729.13 ಕೋ.ರೂ.ಗಳ ಒಟ್ಟು ಹಣಕಾಸು ಅಗತ್ಯವನ್ನು ಅಂದಾಜಿಸಲಾಗಿದ್ದು,ಇದು ಐದು ಜಿಎಸ್‌ಎಲ್‌ವಿಗಳ ನಿರ್ಮಾಣ,ಅಗತ್ಯ ಸೌಲಭ್ಯಗಳ ಹೆಚ್ಚಳ,ಕಾರ್ಯಕ್ರಮ ನಿರ್ವಹಣೆ ಮುಂತಾದವುಗಳ ವೆಚ್ಚಗಳನ್ನೊಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News