×
Ad

ಅಂದರ್ ಬಾಹರ್: ಐವರ ಬಂಧನ

Update: 2019-04-15 22:49 IST

ಶಿರ್ವ, ಎ.15: ಶಿರ್ವ ಗ್ರಾಮದ ನ್ಯಾರ್ಮ ಶ್ರೀಜಾರಂಧಾಯ ದೈವಸ್ಥಾನದ ಬಳಿ ಎ.14ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಮೂಲದ ಸಂಗಪ್ಪಮಾಹದೇವಪ್ಪ(35), ಮಂಜುನಾಥ್(30), ಚೇತನ ಮಾರಂಬೀಡಿ(24), ಶಂಭಯ್ಯ(22), ಪ್ರಕಾಶ್ ಹುಲ್ಲಪ್ಪ(30) ಬಂಧಿತ ಆರೋಪಿಗಳು. ಇವರಿಂದ 4,130ರೂ. ನಗದು ವಶಪಡಿಸಿಕೊಳ್ಳ ಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕುಂದಾಪುರ ಜೆಎಲ್ಬಿ ರಸ್ತೆಯ ಸುಲಭ್ ಶೌಚಾ ಲಯದ ಬಳಿ ಎ.14ರಂದು ಸಂಜೆ ವೇಳೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಓರ್ವನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೋಣಿ ಗ್ರಾಮದ ಗಣೇಶ(30) ಎಂದು ಗುರುತಿಸಲಾಗಿದೆ. ದಾಳಿ ವೇಳೆ ಲಕ್ಷ್ಮಣ್ ಖಾರ್ವಿ ಖಾರ್ವಿಕೇರಿ, ಪ್ರದೀಪ್ ಕುಂದಾಪುರ, ಪ್ರಖ್ಯಾತ್ ಪೂಜಾರಿ ತೆಕ್ಕಟ್ಟೆ, ಮೋಹನ್ ಮೊಗವೀರ ಕಾಳಾವರ, ಅಭಿಷೇಕ್ ದೇವಾಡಿಗ ಎಂಬವರು ಓಡಿ ಪರಾರಿಯಾಗಿದ್ದಾರೆ.

ಇವರು ಚೆನ್ನೈ ಸುಪರ್ ಕಿಂಗ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು. ಬಂಧಿತನಿಂದ 25,500ರೂ. ನಗದು ಹಾಗೂ ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News