×
Ad

ಕೋಳಿ ಅಂಕ: ಐವರ ಬಂಧನ

Update: 2019-04-15 22:51 IST

ಹಿರಿಯಡ್ಕ, ಎ.15: ಪೆರ್ಡೂರು ಗ್ರಾಮದ ಬಜ್ಜಾಲ್ ಎಂಬಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಐವರನ್ನು ಹಿರಿಯಡ್ಕ ಪೊಲೀಸರು ಎ.14ರಂದು ಸಂಜೆ ವೇಳೆ ಬಂಧಿಸಿದ್ದಾರೆ.

ಉಮೇಶ ಪೂಜಾರಿ, ಸಂತೋಷ, ದಿನೇಶ ಮೊಗವೀರ, ದೇವು ಪೂಜಾರಿ, ಸುಧಾಕರ ಶೆಟ್ಟಿ ಬಂಧಿತ ಆರೋಪಿಗಳು. ಇವರಿಂದ 16 ಕೋಳಿ ಹುಂಜಗಳು, 14 ದ್ವಿಚಕ್ರ ವಾಹನಗಳು, ಎರಡು ಕಾರು ಹಾಗೂ 12,610ರೂ. ನಗದು, ಎರಡು ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News