ಮತಗಟ್ಟೆ ಸಮೀಪ ಪಕ್ಷಗಳ ಬೂತ್‌ಗೆ ಅನುಮತಿ ಅಗತ್ಯ: ಜಿಲ್ಲಾಧಿಕಾರಿ

Update: 2019-04-15 17:49 GMT

ಉಡುಪಿ, ಎ.15: ಎ.18ರಂದು ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನದ ದಿನದಂದು, ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಪರವಾಗಿ ಮತಗಟ್ಟೆಯ 200 ಮೀ. ದೂರದಲ್ಲಿ ಸರಳವಾಗಿ ಬೂತ್ ರಚಿಸಬೇಕು. ಬೂತ್ ರಚಿಸಲು ಸ್ಥಳೀಯ ಗ್ರಾಪಂ ಅಥವಾ ಪುರಸಭೆ, ನಗರಸಭೆ, ಪಟ್ಟಣಪಂಚಾಯತ್‌ನಿಂದ ಕಡ್ಡಾಯವಾಗಿ ಅನುಮತಿ ಪಡೆದಿ ರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಲೋಕಸಬಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಮತ್ತು ಅ್ಯರ್ಥಿಗಳ ಸಭೆುಲ್ಲಿ ಅವರು ಮಾತನಾಡುತಿದ್ದರು.

ಪ್ರತೀ ಬೂತ್‌ನಲ್ಲಿ ಒಂದು ಟೇಬಲ್ ಮತ್ತು 2 ಕುರ್ಚಿ ಹಾಕಲು, 3+1.5 ಅಡಿ ಅಳತೆಯ ಬ್ಯಾನರ್ ಮಾತ್ರ ಅಳವಡಿಸಲು ಅವಕಾಶವಿದೆ. ಶಾಮಿಯಾನ ಅಥವಾ ಟೆಂಟ್ ಹಾಕಲು ಅವಕಾಶವಿಲ್ಲ. ಬೂತ್‌ನಲ್ಲಿ ಜನಜಂಗುಳಿ ಸೇರಬಾರದು, ಯಾವುದೇ ಪ್ರಚಾರ ಸಾಮಗ್ರಿ ಪ್ರದರ್ಶಿಸಬಾರದು. ಬೂತ್ ನಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳು ಸ್ಥಳೀಯರಾಗಿದ್ದು, ಎಪಿಕ್ ಕಾರ್ಡ್ ನ್ನು ಹೊಂದಿರಬೇಕು.

ಬೂತ್ ಹಾಕಲು ರಾಜಕೀಯ ಪಕ್ಷ ಮತ್ತು ಅ್ಯರ್ಥಿಗಳು ನೀಡುವ ಮನವಿಗೆ ಆಯಾ ಗ್ರಾಪಂ ಅಥವಾ ನಗರ ಸ್ಥಳೀಯ ಸಂಸ್ಥೆಗಳು ತಕ್ಷಣವೇ ಅನುಮತಿ ನೀಡಬೇಕು ಎಂದು ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಳ ಮುಖ್ಯಸ್ಥರಿಗೆ ಡಿಸಿ ಸೂಚಿಸಿದರು.

ಮತದಾನದ ದಿನದಂದು ಅ್ಯರ್ಥಿ ಮತ್ತು ಏಜೆಂಟ್ ಸಂಚರಿಸಲು ವಾಹನಕ್ಕೆ ಅನುಮತಿ ನೀಡಲಾಗುವುದು. ಈ ವಾಹನದಲ್ಲಿ ಚಾಲಕ ಸೇರಿ ಗರಿಷ್ಠ 5 ಮಂದಿ ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಅ್ಯರ್ಥಿ ಹೆಸರಲ್ಲಿ ವಾಹನ ಪಡೆದು ಇತರರು ಅದನ್ನು ಉಪಯೋಗಿಸಲು ಅವಕಾಶವಿಲ್ಲ ಎಂದು ಡಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News