×
Ad

ದ್ವಿತೀಯ ಪಿಯು ಫಲಿತಾಂಶ: ಎಕ್ಸಲೆಂಟ್‍ ಕಾಲೇಜಿನಿಂದ ಉತ್ತಮ ಸಾಧನೆ

Update: 2019-04-15 23:44 IST

ಮೂಡುಬಿದಿರೆ:  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೂಡಬಿದಿರೆ ಎಕ್ಸಲೆಂಟ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕಾರ್ತಿಕ್ ಪೈ ಮತ್ತು ಧೀರಜ್ ಹೆಗ್ಡೆ 586 ಅಂಕಗಳನ್ನು ಪಡೆದಿದ್ದಾರೆ. ವಾಣಿಜ್ಯ  ವಿಬಾಗದ ವಿದ್ಯಾರ್ಥಿಗಳಾದ ಚೈತ್ರಾ ವಿ ಹೆಗಡೆ ಮತ್ತು ವರ್ಷಿಣಿ 580 ಅಂಕ ಗಳಿಸಿದ್ದಾರೆ. 

ಒಟ್ಟು 388 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 235 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 151 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಸುದೀಪ್ ಜವಳಿ, ಗಾನಶ್ರೀ ಕೆ.ಎಸ್, ಸಂಜಯ್ ಜಿ.ಬಿ., ಅಭಿಷೇಕ್‍ಎಂ.ಜಿ, ಶ್ಲೋಕಶ್ರೀ, ಸಿರಿ ಸಿ.ಜೆ, ಕೀರ್ತಿ ಬಿಎನ್‍ಸಿ, ಧನ್ಯ ಹೆಗಡೆ, ವಂದನಾಜೈನ್, ಧೀರಜ್ ಹೆಗ್ಡೆ, ಸಚಿನ್ ನಾಯಕ್, ಕಾರ್ತಿಕ್ ವಿ ಪೈ, ರಿಷೀಕ್ ನಾಚಪ್ಪ, ಚೈತ್ರಗಣಪತಿ ಹೆಗಡೆ, ವರ್ಷಿಣಿಎಚ್ ವಿ, ಇಶಿತಾ ಜೈನ್, ಪ್ರಣವ್ ಪೈ, ಪ್ರಿಯಾಂಕ ಭಟ್, ಸೌರವ್ ಬಿಲ್ಲೂರು, ಸುಯಜ್ಞಇವರು 570ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ.   ವಾಣಿಜ್ಯ ವಿಭಾಗದಲ್ಲಿ 13 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 40 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿರುತ್ತಾರೆ

ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಶ್ರೀ ಯುವರಾಜ್‍ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್  ಹಾಗೂ ಪ್ರಾಂಶುಪಾಲರಾದ ಶ್ರೀ ಪ್ರದೀಪ್‍ಕುಮಾರ್ ಶೆಟ್ಟಿ, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News