ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಮಳೆ, ಚಂಡಮಾರುತಕ್ಕೆ 22 ಮಂದಿ ಬಲಿ

Update: 2019-04-17 06:19 GMT

ಜೈಪುರ, ಎ.17: ಉತ್ತರ ಭಾರತದ ಕೆಲ ಭಾಗಗಳಲ್ಲಿ ಮಂಗಳವಾರ ಸಂಭವಿಸಿದ ಮಳೆ ಹಾಗೂ ಚಂಡಮಾರುತಕ್ಕೆ 22 ಮಂದಿ ಬಲಿಯಾಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

  ರಾಜಸ್ಥಾನದಲ್ಲಿ 16 ಜನರು ಹಾಗೂ ಮಧ್ಯಪ್ರದೇಶದಲ್ಲಿ ಆರು ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿದೆ. ಗುಜರಾತ್‌ನಲ್ಲೂ ಅಕಾಲಿಕ ಚಂಡಮಾರುತ ಹಾಗೂ ಮಳೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.

  ರಾಜಸ್ಥಾನದಲ್ಲಿ ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಹಲವು ಪ್ರದೇಶಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಚಿತ್ತೋರ್‌ಗಢ, ಶ್ರೀಗಂಗಾನಗರ, ಅಜ್ಮೇರ್, ಕೋಟಾ ಹಾಗೂ ಪಿಲಾನಿಯಲ್ಲಿ ಭಾರೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಧಾನಿ ಮೋದಿ ರ್ಯಾಲಿಗೆ ಭಂಗ: ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲೂ ಚಂಡ ಮಾರುತದ ಪರಿಣಾಮಬೀರಿದೆ. ಧೂಳಿನಿಂದ ಕೂಡಿದ ಚಂಡಮಾರುತಕ್ಕೆ ಎ.17 ರಂದು ಸಬರಕಾಂತ್ ಜಿಲ್ಲೆಯ ಹಿಮ್ಮತ್‌ನಗರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರ್ಯಾಲಿಗೆ ಹಾಕಲಾಗಿದ್ದ ಟೆಂಟ್‌ಗಳು ಮುರಿದುಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News