3 ವರ್ಷವಿದ್ದಾಗ ವಿಲಾಸಿ ಕಾರು, 9ನೆ ವಯಸ್ಸಿನಲ್ಲಿ 7 ಕೋಟಿ ರೂ. ಗೆದ್ದ ಭಾರತೀಯ ಬಾಲಕಿ !

Update: 2019-04-17 09:41 GMT

ದುಬೈ : ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲ್ಲಿಯನೇರ್ ನಲ್ಲಿ ಒಂಬತ್ತು ವರ್ಷದ ಭಾರತೀಯ ಬಾಲಕಿ ಎಲಿಝಾ ಎಂ  ಒಂದು ಮಿಲಿಯನ್ ಅಮೆರಿಕನ್ ಡಾಲರ್ ಜಾಕ್ ಪಾಟ್ ಗೆದ್ದಿದ್ದಾಳೆ. ಇದೇ ರ್ಯಾಫಲ್ ಡ್ರಾದಲ್ಲಿ ಆಕೆ ಆರು ವರ್ಷಗಳ ಹಿಂದೆ ವಿಲಾಸಿ ಕಾರು ಬಹುಮಾನವಾಗಿ ಪಡೆದಿದ್ದಳು.

ಎಲಿಝಾಗೆ ಬಹುಮಾನ ತಂದಿತ್ತ ಟಿಕೆಟ್ ಸಂಖ್ಯೆ 0333 ಆಗಿತ್ತು.  ಮುಂಬೈ ಮೂಲದವರಾಗಿರುವ ಎಲಿಝಾ ಕುಟುಂಬ ದುಬೈಯಲ್ಲಿ ಕಳೆದ 19 ವರ್ಷಗಳಿಂದ ವಾಸವಾಗಿದ್ದು ಎಲಿಝಾ ತಂದೆ  ಈ ರ್ಯಾಫಲ್ ಡ್ರಾದಲ್ಲಿ ನಿಯಮಿತವಾಗಿ ಭಾಗವಹಿಸುತ್ತಾ ಬಂದವರು. ಒಂಬತ್ತು ತಮ್ಮ ಅದೃಷ್ಟದ ಸಂಖ್ಯೆ ಎಂದು ನಂಬಿದ್ದ ಅವರು  ಈ ಬಾರಿ ತಮ್ಮ ಪುತ್ರಿಯ ಹೆಸರಿನಲ್ಲಿ 0333 ಸಂಖ್ಯೆಯ ಟಿಕೆಟ್ ಅನ್ನು ಆನ್‍ಲೈನ್ ಮೂಲಕ ಖರೀದಿಸಿದ್ದರು. ಜನವರಿ 2013ರಲ್ಲಿ ಎಲಿಝಾ ದುಬೈ ಡ್ಯೂಟಿ ಫ್ರೀ ಪ್ರಮೋಶನ್ ನಲ್ಲಿ ವಿಲಾಸಿ ಮೆಕ್‍ಲಾರೆನ್ ಕೂಪ್ ಕಾರನ್ನು ಗೆದ್ದಿದ್ದಳು.

ಈ ರ್ಯಾಫಲ್ ಡ್ರಾ 1999ರಲ್ಲಿ ಆರಂಭಗೊಂಡಂದಿನಿಂದ ಒಂದು ಮಿಲಿಯನ್ ಡಾಲರ್ ಬಹುಮಾನ ಪಡೆದ 140ನೇ ಭಾರತೀಯ ವ್ಯಕ್ತಿ ಆಕೆಯಾಗಿದ್ದಾಳೆ.

ಈ ಬಾರಿಯ ದುಬೈ ಡ್ಯೂಟಿ ಫ್ರೀ ಫೈನೆಸ್ಟ್ ಸರ್‍ಪ್ರೈಸ್ ಪ್ರಮೋಶನ್ ನಲ್ಲಿ  ದುಬೈ ಮೂಲದ ಭಾರತೀಯ 23 ವರ್ಷದ ಮೊಹಮ್ಮದ್ ಹನೀಫ್ ಆದಂ ಇಂಡಿಯನ್ ಸ್ಕೌಟ್ ಬಾಬ್ಬರ್ ಬೈಕ್ ಗೆದ್ದಿದ್ದಾರೆ.  ಕಳೆದ 20 ವರ್ಷಗಳಿಂದ ದುಬೈಯಲ್ಲಿ ನೆಲೆಸಿರುವ ಅವರು ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News