ಕಾಪು ಚುನಾವಣೆಗೆ ಸಜ್ಜು: ಗಮನಸೆಳಯುತ್ತಿರುವ ಸಖಿ ಮತಗಟ್ಟೆ

Update: 2019-04-17 13:02 GMT

ಕಾಪು: ಗುರುವಾರ ನಡೆಯಲಿರುವ ಲೋಕಸಭಾ ಚುನಾವಣೆಗೆ ಕಾಪು ವಿಧಾನಸಭಾ ಕ್ರೇತ್ರ ಸಜ್ಜಾಗಿದೆ.  

208 ಮತಗಟ್ಟೆಗಳ ಪೈಕಿ 14 ಅತೀ ಸೂಕ್ಷ್ಮ, 32 ಸೂಕ್ಷ್ಮ ಮತ್ತು 176 ಸಾಮಾನ್ಯ ಮತಗಟ್ಟೆಗಳಿವೆ. 5 ಸಖಿ ಮತಗಟ್ಟೆಗಳಿವೆ.208 ಮತಗಟ್ಟೆಗಳಲ್ಲಿ ವಿವಿಧ ರೀತಿಯ ಕರ್ತವ್ಯ ನಿರ್ವಹಣೆಗಾಗಿ 1,700 ಮಂದಿ ಸಿಬ್ಬಂದುಗಳನ್ನು ನಿಯೋಜಿಸಿಕೊಳ್ಳಲಾಗಿದೆ.

ಕಾಪು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ. ನಾಗರಾಜ್ ನೇತೃತ್ವದಲ್ಲಿ ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಬುಧವಾರ ಚುನಾವಣಾ ಮತಗಟ್ಟೆಯ ಬಗ್ಗೆ ವಿವರ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹೆಪ್ಸಿಭಾ ರಾಣಿ ಕೋರ್ಲಪಟ್ಟಿ, ಕಾಪು ತಾಲೂಕು ತಹಶೀಲ್ದಾರ್ ರಶ್ಮಿ ಹಾಜರಿದ್ದರು.

208ಮತಗಟ್ಟೆಗಳು: ಕಾಪು ವಿಧಾನಸಭಾ ಕ್ಷೇತ್ರದಲ್ಲಿ 208 ಮತಗಟ್ಟೆಗಳಿದ್ದು, ಒಟ್ಟು 1,84,246 ಮತದಾರರು ಇದ್ದಾರೆ. ಇವರಲ್ಲಿ ಪುರುಷರು 87,749 ಮತ್ತು ಮಹಿಳೆಯರು 96,486 ಹಾಗೂ ಇತರ 11 ಮತದಾರರಿದ್ದಾರೆ. ಇವರಲ್ಲಿ 1299 ವಿಕಲಚೇತನ ಮತದಾರರಿದ್ದು, 5,497 ಹೊಸ ಮತದಾರರು ನೋಂದಾವಣೆ ಮಾಡಿದ್ದು ಇವರಲ್ಲಿ 4,110 ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. 

5 ಸಖಿ ಮತಗಟ್ಟೆಗಳು: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರರು ಹೆಚ್ಚಿರುವ ಕಡೆಗಳಲ್ಲಿ ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಕಾಪು ಪಡು, ಕುರ್ಕಾಲು ಗ್ರಾಮದಲ್ಲಿ 2 ಹಾಗೂ ಮೂಡುಬೆಳ್ಳೆ, ಉದ್ಯಾವರದಲ್ಲಿ ಈ ಕೇಂದ್ರವನ್ನು ತೆರೆಯಲಾಗಿದೆ. ಇಲ್ಲಿ ಸಂಪೂರ್ಣವಾಗಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಕಾರ್ಯನಿರ್ವಹಿಸಲಿದ್ದಾರೆ. ಕಾಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಖಿ ಕೇಂದ್ರವನ್ನು ತೆರೆಯಲಾಗಿದೆ. 

ಅಲ್ಲದೆ ಈ ಮತಗಟ್ಟೆಗಳಲ್ಲಿ ಮತದಾರರಿಗೆ ಉಚಿತ ಆರೋಗ್ಯ ತಪಾಸಣೆ, ಮತದಾರರು ಬರುವಾಗ ಮಕ್ಕಳಿದ್ದಲ್ಲಿ ಅವರಿಗೆ ಚಿಣ್ಣರ ಅಂಗಳ ಎಂಬ ಆಟದ ಕೋಣೆಯನ್ನು ತೆರೆಯಲಾಗಿದೆ. ಅಲ್ಲದೆ ಸೆಲ್ಫಿ ಕಾರ್ನರ್ ಇದ್ದು, ಮತಗಟ್ಟೆಯನ್ನು ವಿವಿಧ ಬಣ್ಣಗಳಿಂದ ಅಲಂಕರಿಸಲಾಗಿದೆ. ಈ ಮತದಾನ ಕೇಂದ್ರ ಎಲ್ಲರನ್ನು ಗಮನಸೆಳೆಯುವಂತಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News