×
Ad

ಲೋಕಸಭಾ ಚುನಾವಣೆ: ಮತದಾನಕ್ಕೆ ಬೇಕಾದ ಅರ್ಹ ದಾಖಲೆಗಳು

Update: 2019-04-17 18:36 IST

ಮಂಗಳೂರು, ಎ.17: ಲೋಕಸಭಾ ಸಾರ್ವತ್ರಿಕ ಚುನಾವಣೆ 2019ರ ಮತದಾನದ ಸಂದರ್ಭದಲ್ಲಿ ಕೇವಲ ವೋಟರ್ ಸ್ಲಿಪ್‌ನೊಂದಿಗೆ ತೆರಳದೆ ಎಪಿಕ್ ಕಾರ್ಡ್ (ಚುನಾವಣಾ ಗುರುತಿನ ಚೀಟಿ) ಅಥವಾ ಆಧಾರ್ ಕಾರ್ಡ್‌ನೊಂದಿಗೆ ಬರುವಂತೆ ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಈ ಬಾರಿಯ ಮತದಾನದಲ್ಲಿ ವೋಟರ್ ಸ್ಲಿಪ್ ಪರ್ಯಾಯ ಗುರುತಿನ ದಾಖಲಾತಿ ಆಗಿರುವುದಿಲ್ಲ. ಹಾಗಾಗಿ ಅರ್ಹ ಮತದಾರರು ಮತದಾನ ಕೇಂದ್ರಕ್ಕೆ ಎಪಿಕ್‌ನೊಂದಿಗೆ ಇತರ 11 ಅಧಿಕೃತ ಗುರುತಿನ ಚೀಟಿಗಳಲ್ಲಿ ಒಂದನ್ನು ಹಾಜರುಪಡಿಸಿದಲ್ಲಿ ಮಾತ್ರ ಮತದಾನ ಮಾಡಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಧಿಕೃತ ದಾಖಲೆಗಳು:
* ಪಾಸ್‌ಪೋರ್ಟ್
* ಡ್ರೈವಿಂಗ್ ಲೈಸೆನ್ಸ್
* ಆಧಾರ್ ಕಾರ್ಡ್
* ಪಾನ್‌ಕಾರ್ಡ್
* ಭಾವಚಿತ್ರವಿರುವ ಪಿಂಚಣಿ ದಾಖಲೆಗಳು
* ಸಂಸದರು/ಶಾಸಕರಿಗೆ ನೀಡಲಾದ ಅಧಿಕೃತ ಕಾರ್ಡ್
* ಕೇಂದ್ರ/ರಾಜ್ಯ ಪಬ್ಲಿಕ್ ಸೆಕ್ಟರ್ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ
* ಅಂಚೆ ಕಚೇರಿ/ ಬ್ಯಾಂಕ್‌ಗಳಲ್ಲಿ ತೆರೆದು ಉಳಿತಾಯ ಖಾತೆಯ ಕುರಿತು ನೀಡಿದ ಭಾವಚಿತ್ರವಿರುವ ಪಾಸ್‌ಪುಸ್ತಕ
* ಆರ್‌ಜಿಎ, ಎನ್‌ಪಿಆರ್ ಬಾಬ್ತು ಸ್ಮಾರ್ಟ್ ಕಾರ್ಡ್
* ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್
* ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯು ನೀಡಿರುವ ಆರೋಗ್ಯ ವಿಮೆಯ ಸ್ಮಾರ್ಟ್‌ ಕಾರ್ಡ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News