ಅನಾಮಿಕ ಯುವತಿಗೆ ಬೆದರಿ 20 ಶಾಲೆಗಳು ಬಂದ್ !

Update: 2019-04-17 16:13 GMT

ಡೆನ್ವರ್ (ಕೊಲರಾಡೊ), ಎ. 17: 18 ವರ್ಷದ ತರುಣಿಯೊಬ್ಬಳು ಆಯುಧವೊಂದನ್ನು ಹಿಡಿದು ಓಡಾಡಿಕೊಂಡಿದ್ದಾಳೆ ಹಾಗೂ ‘ಅತ್ಯಂತ ಅಪಾಯಕಾರಿ’ಯಾಗಿದ್ದಾಳೆ ಎಂಬ ‘ವಿಶ್ವಾಸಾರ್ಹ ವರದಿ’ಗಳ ಹಿನ್ನೆಲೆಯಲ್ಲಿ ಅಮೆರಿಕದ ಕೊಲರಾಡೊದ ಕೊಲಂಬೈನ್ ಹೈಸ್ಕೂಲ್ ಮತ್ತು ಸುತ್ತಮುತ್ತಲಿನ ಕನಿಷ್ಠ 20 ಶಾಲೆಗಳಲ್ಲಿ  ಮಂಗಳವಾರ ಲಾಕೌಟ್ ಘೋಷಿಸಲಾಗಿದೆ.

ಕೊಲಂಬೈನ್ ಹೈಸ್ಕೂಲ್‌ನಲ್ಲಿ 1999ರ ಎಪ್ರಿಲ್‌ನಲ್ಲಿ ನಡೆದ ಹತ್ಯಾಕಾಂಡದ 20ನೇ ವಾರ್ಷಿಕ ದಿನಕ್ಕೆ ನಾಲ್ಕು ದಿನಗಳು ಇರುವಂತೆಯೇ, ಅಧಿಕಾರಿಗಳು ಈ ಘೋಷಣೆ ಹೊರಡಿಸಿದ್ದಾರೆ. 20 ವರ್ಷಗಳ ಹಿಂದೆ ಭಾರೀ ಶಸ್ತ್ರಸಜ್ಜಿತರಾಗಿದ್ದ ಇಬ್ಬರು ವಿದ್ಯಾರ್ಥಿಗಳು ಡೆನ್ವರ್ ಹೈಸ್ಕೂಲ್‌ಗೆ ನುಗ್ಗಿ 12 ಸಹಪಾಠಿಗಳು ಮತ್ತು ಓರ್ವ ಶಿಕ್ಷಕರನ್ನು ಕೊಂದಿದ್ದರು. ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಅವಧಿಯಲ್ಲಿ ಶಾಲೆಗಳ ಒಳಗೆ ಚಟುವಟಿಕೆಗಳು ಎಂದಿನಂತೆ ನಡೆಯಬಹುದಾಗಿದೆ. ಆದರೆ, ಶಾಲೆಯ ಒಳಗೆ ಹೋಗುವುದನ್ನು ಹಾಗೂ ಹೊರಗೆ ಬರುವುದನ್ನು ನಿಯಂತ್ರಿಸಲಾಗಿದೆ ಎಂದು ಜೆಫರ್‌ಸನ್ ಕೌಂಟಿ ಶೆರಿಫ್ ಕಚೇರಿ ಟ್ವಿಟರ್‌ನಲ್ಲಿ ತಿಳಿಸಿದೆ.

‘‘ನಿನ್ನೆ ರಾತ್ರಿ ಸೊಲ್ ಪಾಯಸ್ ಎಂಬ ತರುಣಿಯು ಕೊಲರಾಡೊಗೆ ಪ್ರಯಾಣಿಸಿ ಬೆದರಿಕೆ ಹಾಕಿದ್ದಾಳೆ. ಅವಳು ಆಯುದ್ಧ ಹೊಂದಿದ್ದು, ಅತ್ಯಂತ ಅಪಾಯಕಾರಿಯಾಗಿದ್ದಾಳೆ’’ ಎಂದು ಶೆರಿಫ್ ಕಚೇರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News