ಹೆಬ್ರಿಯಲ್ಲಿ ಕಸದಿಂದ ರಸ ತರೇತಿ ಕಾರ್ಯಗಾರ

Update: 2019-04-17 15:07 GMT

ಹೆಬ್ರಿ, ಎ.17: ಎಸೆಯುವ ವಸ್ತುಗಳನ್ನು ಜೋಪಾನವಾಗಿಟ್ಟುಕೊಂಡು ಅವು ಗಳಿಂದ ವಿವಿಧ ಕಲಾಕೃತಿಯನ್ನು ರಚಿಸಬಹುದು. ಮದುವೆ ಕಾಗದಗಳನ್ನು ಎಸೆಯದೆ ಅಂದದ ಹೂಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಾಗ ಕಸದಿಂದ ರಸ ತಯಾರಿಸ ಬಹುದು ಎಂದು ಹೆಬ್ರಿ ಸರಕಾರಿ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕಿ ವನಿತಾ ಉದ್ಯಾವರ ಹೇಳಿದ್ದಾರೆ.

ಹೆಬ್ರಿ ಸೂಪರ್ ಮಾರ್ಕೆಟ್‌ನ ಸಹಯೋಗದೊಂದಿಗೆ ಹೆಬ್ರಿ ದುರ್ಗಾ ಆರ್ಕೆಡ್‌ನ ಶಾರದ ನಂದಪ್ಪ ಶೆಟ್ಟಿ ಸಭಾಭವನದಲ್ಲಿ ಒಂದು ತಿಂಗಳುಗಳ ಕಾಲ ಹಮ್ಮಿಕೊಳ್ಳಲಾದ ನಲಿಕಲಿ-2019 ಬೇಸಗೆ ಶಿಬಿರದ ವಿದ್ಯಾರ್ಥಿಗಳಿಗೆ ಕಸದಿಂದ ರಸ, ಚಿತ್ರಕಲೆ, ೈಂಟಿಂಗ್ ಮೊದಲಾದ ತರಬೇತಿ ನೀಡಿ ಅವರು ಮಾತ ನಾಡುತಿದ್ದರು.

ಈ ಸಂದರ್ಭದಲ್ಲಿ ಕುಚ್ಚೂರು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ, ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಚಾಣಕ್ಯ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ಸ್ವಾಗತಿಸಿದರು. ಮುಟ್ಲುಪಾಡಿ ಉದಯ ಶೆಟ್ಟಿ ವಂದಿಸಿ ದರು.

ಪ್ರಜ್ಞಾ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News