×
Ad

ಬಿಸುಪರ್ಬ ಸಾಂಸ್ಕೃತಿಕ ಸ್ಪರ್ಧೆ: ಕಾರ್ಕಳ ಬಂಟರ ಸಂಘ ಪ್ರಥಮ

Update: 2019-04-17 20:38 IST

ಉಡುಪಿ, ಎ.17: ಬಂಟರ ಸಂಘ ಬೆಂಗಳೂರು ಸಾಂಸ್ಕೃತಿಕ ಸಮಿತಿಯ ವತಿಯಿಂದ ಬಿಸುಪರ್ಬದ ಅಂಗವಾಗಿ ಇತ್ತೀಚೆಗೆ ಆಯೋಜಿಸಲಾದ ಅಂತರ್ ಬಂಟ್ಸ್ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾರ್ಕಳ ಬಂಟರ ಸಂಘ ಪ್ರಥಮ ಸ್ಥಾನ ಗೆದ್ದು ಕೊಂಡಿದೆ.

ಸುರತ್ಕಲ್ ಬಂಟರ ಸಂಘ ದ್ವಿತೀಯ, ಥಾಣೆ ಬಂಟರ ಸಂಘ ತೃತೀಯ ಸ್ಥಾನ ಪಡೆದುಕೊಂಡಿವೆ. ಕಾರ್ಕಳ ಬಂಟರ ಸಂಘದ ಅಧ್ಯಕ್ಷ ನಂದಳಿಕೆ ಸುಹಾಸ್ ಹೆಗ್ಡೆ ನೇತೃತ್ವದಲ್ಲಿ ಭಾಗವಹಿಸಿದ ತಂಡ ತುಳುನಾಡ ಸಿರಿ ಹಾಗು ಬಂಟ ಸಂಸ್ಕೃತಿ ಯನ್ನು ಪರಿಚಯಿಸುವ ಕಾರ್ಯಕ್ರಮವನ್ನು ನೀಡಿ ಕಲಾಭಿಮಾನಿಗಳ ಪ್ರಶಂಸೆ ಯೊಂದಿಗೆ ಪ್ರಥಮ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಸುಧೀಂದ್ರ ಶಾಂತಿ ಸಂಯೋಜನೆಯಲ್ಲಿ ಮೂಡಿ ಬಂದ ಕಾರ್ಯಕ್ರಮದಲ್ಲಿ ಸುಹಾಸ್ ಹೆಗ್ಡೆ, ವಿಜಯ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಅವಿನಾಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಸುಹಾಸ್ ಶೆಟ್ಟಿ, ಸುಕೇಶ್ ಶೆಟ್ಟಿ, ಜ್ಯೋತಿ ಎಸ್.ಶೆಟ್ಟಿ, ವಂದನಾ ರೈ, ಸುನೀತಾ ಶೆಟ್ಟಿ, ಶಾಶ್ವತಿ ಶೆಟ್ಟಿ, ಸೀಮಾ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ, ಪೂರ್ಣಿಮ ಹೆಗ್ಡೆ ಸೇರಿದಂತೆ 60ಕ್ಕೂ ಅಧಿಕ ಬಂಟ ಕಲಾವಿದರು ಭಾಗವಹಿಸಿದ್ದರು. ತಂಡದ ಪ್ರಸಾದನದಲ್ಲಿ ಆದರ್ಶ ಕಾರ್ಕಳ ಸಹಕರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News