ಎ. 20: ತಾರೀಬೇರು ಉರೂಸ್ ಮುಬಾರಕ್
Update: 2019-04-17 20:39 IST
ಉಡುಪಿ, ಎ.17: ಹೇರೂರು ತಾರೀಬೇರು ಖ್ವಾಜಾ ಬುಡನ್ ಷಾ ವಲಿ ಯುಲ್ಲಾ(ಖ.ಸಿ.)ರವರ ಉರೂಸ್ ಮುಬಾರಕ್ ಎ.20ರಂದು ಬೆಳಗ್ಗೆ 9:30 ರಿಂದ ಅಪರಾಹ್ನ 2:30ರವರೆಗೆ ನಡೆಯಲಿದೆ.
ಬೆಳಗ್ಗೆ 11ಗಂಟೆಗೆ ಮುಖಾಃಂ ಝಿಯಾರತ್, 11:30ಕ್ಕೆ ಮೌಲಿದ್ ಕಾರ್ಯಕ್ರಮ ಜರಗಲಿದೆ. ನಾವುಂದ ಜುಮಾ ಮಸೀದಿಯ ಖತೀಬ್ ಜಿ.ಕೆ.ಇಖ್ರ ಮುಲ್ಲಾಹ್ ಖಾಮಿಲ್ ಸಖಾಫಿ ನೇತೃತ್ವ ವಹಿಸಲಿದ್ದು, ಸೈಯ್ಯದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುವಾ ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.