ಯೆಮನ್ ಯುದ್ಧಕ್ಕೆ ಬೆಂಬಲ ನಿಲ್ಲಿಸುವ ನಿರ್ಣಯಕ್ಕೆ ಟ್ರಂಪ್ ವೀಟೊ

Update: 2019-04-17 15:54 GMT

ವಾಶಿಂಗ್ಟನ್, ಎ. 17: ಯೆಮನ್‌ನಲ್ಲಿ ಸೌದಿ ಅರೇಬಿಯ ನೇತೃತ್ವದಲ್ಲಿ ನಡೆಯುತ್ತಿರುವ  ಯುದ್ಧಕ್ಕೆ ಅಮೆರಿಕ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವಂತೆ ತನಗೆ ನಿರ್ದೇಶನ ನೀಡುವ  ಸಂಸತ್ತು ಕಾಂಗ್ರೆಸ್‌ನ ನಿರ್ಣಯವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ವೀಟೊ (ತಡೆ) ಚಲಾಯಿಸಿದ್ದಾರೆ.

ಈ ರೀತಿಯ ನಿರ್ಣಯಕ್ಕೆ ಟ್ರಂಪ್ ತಡೆ ನೀಡಿರುವುದು ಇದು ಎರಡನೇ ಬಾರಿಯಾಗಿದೆ.

ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಂದ ಕಾಂಗ್ರೆಸ್‌ನಲ್ಲಿ ಮಂಡಿಸಲ್ಪಟ್ಟ ನಿರ್ಣಯವು ಯೆಮನ್ ಯುದ್ಧಕ್ಕಾಗಿ ಅಮೆರಿಕ ಅಧ್ಯಕ್ಷರನ್ನು ಟೀಕಿಸುತ್ತದೆ ಹಾಗೂ ಯುದ್ಧಕ್ಕೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳುವ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶವನ್ನು ಹೊಂದಿತ್ತು.

ಈ ನಿರ್ಣಯಕ್ಕೆ ವೀಟೊ ಚಲಾಯಿಸಿದ ಟ್ರಂಪ್, ಅದನ್ನು ಖಂಡಿಸಿದ್ದಾರೆ. ‘‘ಈ ನಿರ್ಣಯವು ನನ್ನ ಸಾಂವಿಧಾನಿಕ ಅಧಿಕಾರಗಳನ್ನು ದುರ್ಬಲಗೊಳಿಸುವ ಅಪಾಯಕಾರಿ ಹಾಗೂ ಅನಗತ್ಯ ಪ್ರಯತ್ನವಾಗಿದೆ. ಇದು ಅಮೆರಿಕದ ಪ್ರಜೆಗಳು ಮತ್ತು ಧೀರ ಸೈನಿಕರ ಜೀವಗಳನ್ನು ಅಪಾಯಕ್ಕೆ ಗುರಿಪಡಿಸುತ್ತದೆ’’ ಎಂದು ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News