5 ವರ್ಷಗಳಲ್ಲಿ ನೋಟ್ರ ಡಾಮ್ ಮರುನಿರ್ಮಾಣ: ಮ್ಯಾಕ್ರೋನ್

Update: 2019-04-17 15:59 GMT

ಪ್ಯಾರಿಸ್, ಎ. 17: ಬೆಂಕಿಯಿಂದ ಹಾನಿಗೀಡಾಗಿರುವ ಫ್ರಾನ್ಸ್‌ನ 800 ವರ್ಷಗಳ ಹಳೆಯ ನೋಟ್ರ ಡಾಮ್ ಕ್ಯಾಥೆಡ್ರಲ್‌ನ್ನು ಐದು ವರ್ಷಗಳಲ್ಲಿ ಫ್ರಾನ್ಸ್ ಮರುನಿರ್ಮಾಣ ಮಾಡುತ್ತದೆ ಎಂದು ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಮಂಗಳವಾರ ಹೇಳಿದ್ದಾರೆ.

ಫ್ರಾನ್ ರಾಜಧಾನಿ ಪ್ಯಾರಿಸ್‌ನ ಹೃದಯದಂತಿದ್ದ ನೋಟ್ರ ಡಾಮ್ ಚರ್ಚ್‌ಗೆ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಆಂಶಿಕವಾಗಿ ಸುಟ್ಟುಹೋಗಿದೆ. ಟೆಲಿವಿಶನ್‌ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

‘‘ನಾವು ನೋಟ್ರ ಡಾಮನ್ನು ಇನ್ನೂ ಹೆಚ್ಚು ಸುಂದರವಾಗಿ ನಿರ್ಮಿಸುತ್ತೇವೆ. ಅದು ಐದು ವರ್ಷಗಳಲ್ಲಿ ಪೂರ್ಣಗೊಳ್ಳಬೇಕೆಂದು ನಾನು ಬಯಸುತ್ತೇನೆ. ನಾವು ಅದನ್ನು ಮಾಡಬಲ್ಲೆವು’’ ಎಂದು ಮ್ಯಾಕ್ರೋನ್ ಹೇಳಿದರು.

ಇಂದು ಇಂಗ್ಲೆಂಡ್‌ನಾದ್ಯಂತ ಚರ್ಚ್ ಗಂಟೆ

ನೋಟ್ರ ಡಾಮ್ ಬೆಂಕಿಯಿಂದ ಘಾಸಿಗೊಂಡಿರುವ ಫ್ರಾನ್ಸ್ ಜನತೆಗೆ ಸಾಂತ್ವನ ಹೇಳುವುದಕ್ಕಾಗಿ ಗುರುವಾರ ಇಂಗ್ಲೆಂಡ್‌ನಾದ್ಯಂತ ಚರ್ಚ್ ಗಂಟೆಗಳು ಮೊಳಗಲಿವೆ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಹೇಳಿದ್ದಾರೆ.

‘‘ನೋಟ್ರ ಡಾಮ್ ಜಗತ್ತಿನ ಅತ್ಯಂತ ಸುಂದರ ಕಟ್ಟಡಗಳ ಪೈಕಿ ಒಂದು ಹಾಗೂ ಫ್ರಾನ್ಸ್‌ನ ಸಂಕೇತವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News