ಮಣಿಪಾಲ: ರಾಬಿನ್ ಸಿಂಗ್ ಕ್ರಿಕೆಟ್ ಅಕಾಡೆಮಿ ಪ್ರಾರಂಭ

Update: 2019-04-17 16:40 GMT

 ಮಣಿಪಾಲ, ಎ.17: ಕ್ರಿಕೆಟ್ ಆಟದಲ್ಲಿ ತೊಡಗಲು ಬೇಕಾದ ಪ್ರಾಥಮಿಕ ಅವಶ್ಯಕತೆಗಳಾದ ದೈಹಿಕ ಮಾನಸಿಕ ಕ್ಷಮತೆಗಳತ್ತ ಗಮನ ಹರಿಸದೆ ಮುನ್ನಡೆದಲ್ಲಿ ಮುಂದೆ ಅದರಿಂದ ಹಿನ್ನಡೆಯಾಗಬಹುದು. ಹೀಗಾಗದಂತೆ ಕ್ರಿಕೆಟ್ ಆಟದ ಸರ್ವಾಂಗೀಣ ತರಬೇತಿ ನೀಡುವ ನಿಟ್ಟಿನಲ್ಲಿ ಮಣಿಪಾಲದಲ್ಲಿ ರಾಬಿನ್ ಸಿಂಗ್ ಸ್ಪೋರ್ಟ್ಸ್ ಅಕಾಡೆಮಿಯನ್ನು ಪ್ರಾರಂಭಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ಹೇಳಿದ್ದಾರೆ.

ಮಣಿಪಾಲ ಎಂಡ್ ಪಾಯಿಂಟಿನ ಮಾಹೆ ಕ್ರಿಕೆಟ್ ಮೈದಾನದಲ್ಲಿ ಮಾಹೆ ಮತ್ತು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಜೊತೆಗಾರಿಕೆಯಲ್ಲಿ ಸ್ಥಾಪಿತವಾಗಿರುವ ರಾಬಿನ್ ಸಿಂಗ್ ಸ್ಪೋರ್ಟ್ಸ್ ಅಕಾಡೆಮಿ ಹಮ್ಮಿಕೊಂಡಿರುವ 40 ದಿನಗಳ ಅವಧಿಯ ಕ್ರಿಕೆಟ್ ತರಬೇತಿ ಶಿಬಿರವನ್ನು ಉ್ಘಾಟಿಸಿ ಅವರು ಮಾತನಾಡು ತಿದ್ದರು.

ಮಾಹೆ ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಫಿಡ್ಡಿ ಡೇವೀಸ್ ಮಾತನಾಡಿ, ಕ್ರೀಡಾಳುಗಳ ದೈಹಿಕ ಕ್ಷಮತೆಯನ್ನು ಪರೀಕ್ಷಿಸುವ, ಕ್ರೀಡಾ ಗಾಯಗಳನ್ನು ದೂರವಿರಿಸುವ, ಪರಿಹರಿಸುವ ನಿಟ್ಟಿನಲ್ಲಿ ಇಂದು ವಿಜ್ಞಾನವು ಮಹತ್ತರ ಸಾಧನೆ ಮಾಡಿದ್ದು, ಈ ನಿಟ್ಟಿನಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಗಳು ಬಂದಿವೆ. ಕ್ರೀಡಾಪಟು ಒಂದು ಕಿ.ಮೀ. ದೂರಲ್ಲಿದ್ದರೂ ಆತನ ದೈಹಿಕ ಚಟುವಟಿಕೆಯನ್ನು ಅಳೆಯುವ ಸಾಧನಗಳು ತಮ್ಮ ವಿಭಾಗದಲ್ಲಿದ್ದು ಅವುಗಳ ಉಪಯೋಗವನ್ನು ಇಲ್ಲಿನ ಶಿಬಿರಾರ್ಥಿಳಿಗೆ ಒದಗಿಸುವ ಯೋಚನೆಯಿದೆ ಎಂದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಅಧ್ಯಕ್ಷ ರತನ್‌ಕುಮಾರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಅತ್ಯಾಧುನಿಕ ಸೌಲಭ್ಯ ಗಳೊಂದಿಗೆ ಕ್ರಿಕೆಟ್ ತರಬೇತಿ ಶಿಬಿರವು ಆರಂಭಗೊಂಡಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.

ಸಮಾರಂಭದಲ್ಲಿ ಉದಯಕುಮಾರ್ ಶೆಟ್ಟಿ ಮುನಿಯಾಲು, ಸಂಸ್ಥೆಯ ಕಾರ್ಯದರ್ಶಿಬಾಲಕೃಷ್ಣ ಪರ್ಕಳ, ಅಕಾಡೆಮಿಯ ತರಬೇತುದಾರ ರೋಹನ್, ಬಾಲಾಜಿ, ಕ್ರೀಡಾ ನಿರ್ದೇಶಕರಾದ ಶ್ರೀಧರ್, ಉಪೇಂದ್ರ, ದೀಪಕ್, ಶಾಂತಿ ಮೊದಲಾದವರು ಭಾಗವಹಿಸಿದ್ದರು. ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ಸ್ವಾಗತಿಸಿ ದರು. ಬಾಲಕೃಷ್ಣ ಮದ್ದೋಡಿ ವಂದಿಸಿದರು. ಡಾ. ಶೋಭಾ ಕಾರ್ಯಕ್ರಮ ನಿರ್ವಹಿಸಿದರು.

ಶಿಬಿರದಲ್ಲಿ ಜಿಲ್ಲೆ ಮತ್ತು ಹೊರಜಿಲ್ಲೆಗಳ ನೂರರಷ್ಟು ಹುಡುಗ ಮತ್ತು ಹುಡುಗಿಯರು ಭಾಗವಹಿಸುತ್ತಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News