ಬಂಟ್ವಾಳ: ಲೊರೆಟ್ಟೊ ಖಾಸಗಿ ಶಾಲೆಯಲ್ಲಿ ಪಿಂಕ್ ಮತಗಟ್ಟೆ

Update: 2019-04-17 16:48 GMT

ಬಂಟ್ವಾಳ, ಎ. 17: ಮಹಿಳಾ ಮತದಾರರಿಗಾಗಿ ಚುನಾವಣಾ ಆಯೋಗ ಪಿಂಕ್ ಮತಗಟ್ಟೆ ನಿರ್ಮಿಸಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಲೊರೆಟ್ಟೊ ಖಾಸಗಿ ಶಾಲೆಯನ್ನು ಪಿಂಕ್ (ಸಖಿ) ಮತಗಟ್ಟೆಯಾಗಿ ಗುರುತಿಸಲಾಗಿದೆ. ಲೊರೆಟ್ಟೊದಲ್ಲಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 61ರಲ್ಲಿ ಪುರುಷ ಮತದಾರರ ಸಂಖ್ಯೆ 347. ಮಹಿಳೆಯರು 382 ಒಟ್ಟು 729 ಮತದಾರರಿರುವ ಈ ಮತಗಟ್ಟೆಯನ್ನು ಈ ಬಾರಿ ಚುನಾವಣಾ ಆಯೋಗ ಪಿಂಕ್ ಮತಗಟ್ಟೆ ಎಂದು ಗುರುತಿಸಿದೆ.

ಮಹಿಳಾ ಸ್ನೇಹಿ ಮತಗಟ್ಟೆಯಾಗಿರುವ ಇಲ್ಲಿ ಮತಗಟ್ಟೆ ಅಧಿಕಾರಿ, ಪೋಲಿಂಗ್ ಆಫೀಸರ್ ಸಹಿತ ಬಹುತೇಕ ಸಿಬ್ಬಂದಿಗಳು ಮಹಿಳೆಯರಾಗಿದ್ದು, ಮತಗಟ್ಟೆಯನ್ನು ಅಲಂಕರಿಸಿಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News