×
Ad

ಬಿಳಿನೆಲೆ: ಚುನಾವಣೆ ಸಿಬ್ಬಂದಿಯ ಉಪಹಾರದಲ್ಲಿ ಸತ್ತ ಹಲ್ಲಿ ಪತ್ತೆ; ಇಬ್ಬರು ಅಸ್ವಸ್ಥ

Update: 2019-04-18 13:27 IST

ಕಡಬ, ಎ.18: ಮತ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ತರಿಸಲಾದ ಬೆಳಗ್ಗಿನ ಉಪಹಾರದಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದ್ದು, ಆಹಾರವನ್ನು ಸೇವಿಸಿದವರ ಪೈಕಿ ಇಬ್ಬರು ಅಸ್ವಸ್ಥಗೊಂಡು ಘಟನೆ ಇಲ್ಲಿನ ಬಿಳಿನೆಲೆಯಲ್ಲಿ ನಡೆದಿದೆ.

ಅಸ್ವಸ್ಥರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐವರ್ನಾಡು ನಿವಾಸಿ ಜಯಪ್ರಕಾಶ್ ಗೌಡ(35), ಬೆಳ್ಳಾರೆ ನಿವಾಸಿ ರಾಜೇಂದ್ರ(45) ಅಸ್ವಸ್ಥಗೊಂಡವರು.

ಚುನಾವಣೆ ಸಿಬ್ಬಂದಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಸ್ಥಳೀಯ ಹೊಟೇಲಿನಿಂದ ಮಾಡಲಾಗಿತ್ತು. ಹಲವು ಅಧಿಕಾರಿಗಳು ಇದೇ ಆಹಾರವನ್ನು ಸೇವಿಸಿದ್ದಾರೆ‌. ಆದರೆ ಸ್ಥಳೀಯರ ಮಾಹಿತಿ ಪ್ರಕಾರ ಅಸ್ವಸ್ಥಗೊಂಡ ಇಬ್ಬರೂ ಹೊಟೇಲಿನಲ್ಲೇ ಉಪಾಹಾರ ಸೇವಿಸಿ ಆಗಮಿಸಿದ್ದಾರೆ ಎನ್ನಲಾಗಿದೆ. ತಟ್ಟೆಯಲ್ಲಿ ಕಂಡು ಬಂದ ಹಲ್ಲಿಯ ಬಗ್ಗೆ ಸಂಶಯ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News