ಸಹಾಯ ಯಾಚಿಸಿದ ಅನಿವಾಸಿ ಭಾರತೀಯನಿಗೆ ‘ಹಮ್ ಹೈ ನಾ’ ಎಂದ ಸುಷ್ಮಾ ಸ್ವರಾಜ್

Update: 2019-04-18 13:29 GMT

ಹೊಸದಿಲ್ಲಿ, ಎ.18: ತಮ್ಮ ಸಹಾಯ ಕೋರಿದ ಸೌದಿ ಅರೇಬಿಯಾದಲ್ಲಿರುವ ಒಬ್ಬ ಭಾರತೀಯ ನಾಗರಿಕನಿಗೆ ‘‘ಹಮ್ ಹೈ ನಾ’’ ಎಂದು ಟ್ವೀಟ್ ಮಾಡಿ  ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಸಹಾಯದ ಭರವಸೆ ನೀಡಿದ್ದಾರೆ.

ಕಳೆದೊಂದು ವರ್ಷದಿಂದ ಭಾರತಕ್ಕೆ ಮರಳಲು ರಿಯಾದ್ ನಲ್ಲಿರುವ ಭಾರತೀಯ ದೂತಾವಾಸದ ಮೂಲಕ ಪ್ರಯತ್ನಿಸುತ್ತಿದ್ದ ಅಲಿ ಎಂಬವರಿಗೆ ಟ್ವೀಟ್ ಮಾಡಿದ ಸುಷ್ಮಾ ‘‘ಆತ್ಮಹತ್ಯೆಯ ಯೋಚನೆ ಮಾಡಬಾರದು. ಹಮ್ ಹೈ ನಾ, ನಮ್ಮ ರಾಯಭಾರ ಕಚೇರಿ ನಿಮಗೆ ಎಲ್ಲಾ ಸಹಾಯ ಮಾಡುವುದು’’ ಎನ್ನುವ ಮೂಲಕ ಭರವಸೆ ನೀಡಿದರಲ್ಲದೆ ಈ ಟ್ವೀಟ್ ನಲ್ಲಿ ‘‘ರಿಯಾದ್ ನ ಭಾರತೀಯ ದೂತಾವಾಸವನ್ನೂ ಟ್ಯಾಗ್ ಮಾಡಿ ಇದರ ವರದಿ ನನಗೆ ಕಳುಹಿಸಿ ಎಂದಿದ್ದಾರೆ.

ಇದಕ್ಕೂ ಮುಂಚೆ ಟ್ವೀಟ್ ಮಾಡಿದ ಅಲಿ ‘‘ನನಗೆ ಭಾರತಕ್ಕೆ ಮರಳಲು ಸಹಾಯ ಮಾಡುತ್ತೀರಾ? ಸುಮಾರು 12 ತಿಂಗಳುಗಳಿಂದ ರಾಯಭಾರ ಕಚೇರಿಗೆ ಅಲೆಯುತ್ತಿದ್ದೇನೆ. ನನ್ನನ್ನು ಬಾರತಕ್ಕೆ ವಾಪಸ್ ಕಳುಹಿಸಿದರೆ ನನಗೆ ಸಹಾಯ ಮಾಡಿದಂತಾಗುವುದು, ನನಗೆ ನಾಲ್ಕು ಮಕ್ಕಳಿದ್ದಾರೆ’’ ಎಂದು ಬರೆದಿದ್ದರು.


ಇನ್ನೊಂದು ಪ್ರಕರಣದಲ್ಲಿ ಅಮೆರಿಕದ ನಿವಾಸಿ ಕ್ಷಿತಿಜ್ ಎಂಬವರು ಅಲ್ಲಿನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ಕಾನ್ಸುಲೇಟ್ ನಿಂದ ತಾನು ಪಡೆಯಬೇಕಿದ್ದ ದಾಖಲೆಗೆ ‘ಹಳೆಯ ಪಾವತಿ ವಿಧಾನ’ ಅನುಸರಿಸುತ್ತಿದೆ. ಹಣ ಪಾವತಿಯನ್ನು ಮನಿ ಆರ್ಡರ್ ಅಥವಾ ಚೆಕ್ ಮೂಲಕ ಮಾಡಲು ಹೇಳುತ್ತಿದೆ. ಈ ಡಿಜಿಟಲ್ ಯುಗದಲ್ಲಿ ಕನಿಷ್ಠ ಕಾರ್ಡ್ ಆದರೂ ಅಮೆರಿಕದಲ್ಲಿ ಸ್ವೀಕರಿಸಬಹುದಲ್ಲವೇ?’’ ಎಂದು ಸಚಿವೆಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಕ್ಷಿತಿಜ್ ಗೆ ಧನ್ಯವಾದ ತಿಳಿಸಿದ ಸುಷ್ಮಾ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News