ಪುತ್ತೂರು: ಹೆರಿಗೆ ನೋವಿನ ನಡುವೆಯೇ ಮತದಾನ ಮಾಡಿ ಮಾದರಿಯಾದ ಮಹಿಳೆ

Update: 2019-04-18 10:12 GMT

ಪುತ್ತೂರು, ಎ.18: ಮಹಿಳೆಯೊಬ್ಬರು ಮತದಾನ ಕೇಂದ್ರಕ್ಕೆ ಆಗಮಿಸಿದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅದರ ನಡುವೆಯೇ ಮತದಾನ ಮಾಡಿ ಬಳಿಕ ಅಲ್ಲಿಂದಲೇ ಆಸ್ಪತ್ರೆಗೆ ತೆರಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯ ಉರ್ಲಾಂಡಿ ನಿವಾಸಿ ಯೋಗಾನಂದ ಎಂಬವರ ಪತ್ನಿ ಮೀನಾಕ್ಷಿ ತುಂಬು ಗರ್ಭಿಣಿಯಾಗಿದ್ದು, ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಮತ ಚಲಾಯಿಸಲು ಪುತ್ತೂರು ತಾಲೂಕು ಪಂಚಾಯತ್ ಮತಗಟ್ಟೆಗೆ ಬಂದಿದ್ದರು. ಈ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನೋವಿನ ನಡುವೆಯೇ ಅವರು ಮತ ಚಲಾವಣೆ ಮಾಡಿದರು. ಬಳಿಕ ಅವರನ್ನು ಅಲ್ಲಿಂದಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಸುಮಾರು 11 ಗಂಟೆಯ ವೇಳೆಗೆ ಅವರಿಗೆ ಸುಖ ಪ್ರಸವವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಪ್ರಸವ ವೇದನೆಯ ನಡುವೆಯೂ ತನ್ನ ಹಕ್ಕು ಚಲಾವಣೆಯಲ್ಲಿ ಮೀನಾಕ್ಷಿ ತೋರಿದ ಬದ್ಧತೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News